ಸೌಂದರ್ಯ ಹೆಚ್ಚಿಸಿಕೊಳ್ಳಲು ಸಾಯಿ ಪಲ್ಲವಿ ಶಸ್ತ್ರ ಚಿಕಿತ್ಸೆ..! ಭಾರಿ ಬದಲಾವಣೆ ಕಂಡು ಪ್ಯಾನ್ಸ್ ಶಾಕ್
Sai Pallavi surgery: ಬಹುಭಾಷಾ ನಟ ಸಾಯಿ ಪಲ್ಲವಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ (sai pallavi plastic surgery) ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಟಿಯ ದೇಹದಲ್ಲಿ ಬದಲಾವಣೆಯಾಗಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗುತ್ತಿದ್ದಂತೆ… ಇದೀಗ ಅವರೇ ಈ ಕುರಿತು ಕ್ಲಾರಿಟಿ ನೀಡಿದ್ದಾರೆ..
ಅಂದಹಾಗೆ, ಸಾಯಿ ಪಲ್ಲವಿ ನಟನೆ, ವ್ಯಕ್ತಿತ್ವ ಮತ್ತು ಸೌಂದರ್ಯದ ವಿಷಯದಲ್ಲಿ, ಇತರ ನಾಯಕಿಯರಿಗಿಂತ ಮೇಲಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬರಾಗಿ ಪ್ರಸಿದ್ಧರಾಗಿದ್ದಾರೆ. ಸಾಯಿ ಪಲ್ಲವಿಯ ನೈಸರ್ಗಿಕ ಸೌಂದರ್ಯವನ್ನು ಇಷ್ಟಪಡದ ಸಿನಿ ಪ್ರೇಕ್ಷಕನೇ ಇಲ್ಲ.
ಈ ತಲೆಮಾರಿನ ನಾಯಕಿಯರಲ್ಲಿ ಸಾಯಿ ಪಲ್ಲವಿ ತುಂಬಾ ವಿಶೇಷ. ಬಹುತೇಕ ಅವರು ಮೇಕ್ಅಪ್ ಇಲ್ಲದೆ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಯಾವುದೇ ಗ್ಲಾಮರಸ್ ಪಾತ್ರಗಳನ್ನು ಮಾಡುವುದಿಲ್ಲ. ಎಷ್ಟೇ ದೊಡ್ಡ ನಾಯಕನಿರಲಿ.. ಎಷ್ಟೇ ಸಂಭಾವನೆ ಕೊಟ್ಟರೂ ಹಸಿಬಿಸಿ ದೃಶ್ಯಗಳಲ್ಲಿ ಪಲ್ಲವಿ ನಟಿಸುವುದಿಲ್ಲವಂತೆ.
ಇನ್ನು ಇತ್ತೀಚಿಗೆ ಸಾಯಿ ಪಲ್ಲವಿ ಶಸ್ತ್ರಚಿಕಿತ್ಸೆಗೆ (sai pallavi face surgery ) ಒಳಗಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅನೇಕ ನಾಯಕಿಯರು ಸೌಂದರ್ಯಕ್ಕಾಗಿ ದೇಹದ ಕೆಲವು ಭಾಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇದೀಗ ಸಾಯಿ ಪಲ್ಲವಿ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.
ಸದ್ಯ ಸಾಯಿ ಪಲ್ಲವಿ ಮುಖದಲ್ಲಿ ಮೊಡವೆಗಳಿಲ್ಲ. ಇದಕ್ಕಾಗಿ ನೀವು ಚಿಕಿತ್ಸೆ ಪಡೆದುಕೊಂಡಿದ್ದೀರಾ..? ನಿಮ್ಮ ಮುಖದ ಮೇಲಿನ ಮೊಡವೆಗಳಿಗೆ ಏನಾಯಿತು? ಎಂದು ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ಸತಃ ನಟಿ ಕ್ಲ್ಯಾರಿಟಿ ನೀಡಿದ್ದಾರೆ.
ಹದಿಹರೆಯದ ಹುಡುಗಿಯರ ಮುಖದಲ್ಲಿ ಮೊಡವೆಗಳು ಸಾಮಾನ್ಯ. ಅವರಿಗೆ ಚಿಕಿತ್ಸೆ ಅಗತ್ಯವಿಲ್ಲ. ವಯಸ್ಸಾದಂತೆ, ಅವುಗಳು ವಾಸಿಯಾಗುತ್ತವೆ ಅಂತ ತಿಳಿಸಿದರು. ಅಲ್ಲದೆ ತಾವು ನಾನು ಉತ್ತಮ ಆಹಾರ ಪದ್ಧತಿ , ಅಲೋವೆರಾ ಜೆಲ್ ಬಳಸುವುದರಿಂದ ಕೂದಲು ದಪ್ಪಗಿದೆ ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.
Share this content:
Post Comment