ನನಗೆ ಕಾಣದಂತೆ ನನ್ನ ಖಾಸಗಿ ಸಂತೋಷವನ್ನು ಮೊಬೈಲ್‌ನಲ್ಲಿ ಚಿತ್ರಿಸಿ…! ನಟ ಜಗ್ಗೇಶ್ ಪೋಸ್ಟ್ ವೈರಲ್
actor Jaggesh post viral : ಸ್ಯಾಂಡಲ್‌ವುಡ್ ನಟ ಜಗ್ಗೇಶ್ ಅವರು ಆಗಾಗ ತಮ್ಮ ವಯಕ್ತಿಕ ವಿಚಾರ ಮತ್ತು ತಮ್ಮ ಜೀವನದಲ್ಲಾಗುವ ಆಗುಹೋಗುಗಳನ್ನು ಮುಕ್ತವಾಗಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇದೀಗ ಅವರು ಸೆಲೆಬ್ರಿಟಿ ಜೀವನದ ಕುರಿತು ಸುದೀರ್ಘ ಬರಹದ ಮೂಲಕ ಮಹತ್ವದ ಸಂಗತಿಯೊಂದನ್ನು ತೆರೆದಿಟ್ಟಿದ್ದಾರೆ..
ಜಗ್ಗೇಶ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ.. “ಸೆಲಿಬ್ರಿಟಿ ಆಗಲು ಎಲ್ಲರು ಒಂದಿಲ್ಲಾ ಒಂದುರೀತಿ ಯತ್ನಿಸುತ್ತಾರೆ ಕೆಲವರು ನಟನಟಿ ಕೆಲವರು ರಂಗಕಲಾವಿದರಾಗಿ, ಕೆಲವರು ಟೀವಿ ಕೆಲವರು ತಮ್ಮ ಮೊಬೈಲ್ ಮೂಲಕ ಮತ್ತೆ ಕೆಲವರು ಯೂಟ್ಯೂಬ್ ಮೂಲಕ ಒಟ್ಟಾರೆ ಹೇಗಾದರು ಸರಿ ಸೆಲಿಬ್ರಿಟ್ ಆಗಲೆಬೇಕು ಆಗದಿದ್ದರೆ ಡಿಪ್ರೇಷನ್ ಗೆ ಒಳಗಾಗುತ್ತಾರೆ.
ಆದರೆ ನಾನು ಸೆಲಿಬ್ರಿಟಿ ಕನಸು ಕಂಡವನಲ್ಲಾ, ಕಟ್ಟಿಕೊಂಡ ಮಡದಿ ಹಾಗು ಸಾಧಿಸಿ ಸಾಯಬೇಕು ಎಂಬ ಸಾಮಾನ್ಯ ಮನುಷ್ಯನ ಕನಸುಮಾತ್ರ ಆಗಿತ್ತು. ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು ಜೊತೆಗೆ ನನ್ನ ವೈಯಕ್ತಿಕ ಸಂತೋಷ ಕಮರಿಹೋಯಿತು.
ಎಲ್ಲರಂತೆ ಎಲ್ಲಾಕಡೆ ಎಲ್ಲಾ ಸಂತೋಷ ನೋಡುವ ಯೋಗ ಇಲ್ಲವಾಯಿತು. ಪ್ರತಿದಿನ ಯಾರು ಏನು ಹೇಳುತ್ತಾರೋ, ಯಾರು ತಪ್ಪು ಕಂಡು ಹಂಗಿಸುತ್ತಾರೋ, ಯಾರು ನಮ್ಮ ಬಾಯಿಂದ ಬಂದ ಅರಿಯದ ಮಾತು ಬಳಸಿ ಲೈಕ್ಸ್ ಪಡೆದು ಗಹಗಹಿಸಿ ನಗುತ್ತಾರೋ, ನನ್ನ ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್ ನಲ್ಲಿ ಚಿತ್ರಿಸಿ ಲೈಕ್ಸ್ ಗಾಗಿ ಸಂಭ್ರಮಿಸೋ ಪುಣ್ಯಾತ್ಮರು ಬರುತ್ತಾರೋ ಯಾರು ನನ್ನ ಕೇಡು ಬಯಸುತ್ತಾರೋ ಒಟ್ಟಾರೆ ಸೆಲಿಬ್ರಿಟಿ ಬದುಕು ಜೀವನಪರ್ಯೆಂತು ಜೈಲುವಾಸ ಬದುಕು ಅಥವ ಮಹಡಿಮನೆಯ ಒಂಟಿ ಬಿಕ್ಷುಕನ ಜೀವನ ಸೆಲಿಬ್ರಿಟಿಯ ಬದುಕು.
ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯೋ ಅಥವ ಪಂಜರದಿಂದ ಹಾರಿ ಪರಿಸರ ಸವಿಯೋ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನಮಾಡುತ್ತಿದ್ದೇನೆ ಇದರಲ್ಲಿ ಪೂರ್ಣಸಂತೋಷ ಸಿಗುತ್ತಿದೆಯೇ ಸತ್ಯವಾಗಿಯು ಇಲ್ಲಾ ಏನೋ ಒಂದೆಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೆ ಈ ಸೆಲಿಬ್ರಿಟಿಯ ಬದುಕು.
ನಾನು ನನ್ನ ಸಹಾಯಕ ರಸ್ತೆಯಲ್ಲಿ ಸಿಕ್ಕ ತಾಟಿಲಿಂಗು ವ್ಯಾಪಾರಿಯ ಜೊತೆ ವ್ಯಾಪಾರ ಮುಗಿಸಿ ಅವನಿಗೆ ಸಂತೋಷ ಆಗುವಂತೆ ಅವನ ಬಂಡವಾಳ ಎರಡು ಹಣ್ಣಿಗೆ ನೀಡಿದಾಗ ಅವನ ಕಂಗಳ ಆನಂದಭಾಷ್ಪ ಶಿವನ ಜಲಾಭಿಷೇಕದಂತೆ ಬಾಸವಾಯಿತು.
ಸೆಲಿಬ್ರಿಟಿಯ ಬದುಕು ಕಂಡು ನೀವು ಸೆಲಿಬ್ರಿಟಿ ಆಗಬೇಕ ಇಲ್ಲಾ ಸೆಲಿಬ್ರಿಟಿಯ ಮೇಲೆ ಪ್ರೀತಿ ಕರುಣೆ ತೋರಬೇಕ ದೇವರು ವಾಸಮಾಡೋ ನಿಮ್ಮ ಹೃದಯಕ್ಕೆ ಸೇರಿದ್ದು. ಜೀವನ ನಾಟಕರಂಗ,ಸಮಾಜವೆ ರಂಗಮಂದಿರ, ದೇವರೆ ಸೂತ್ರದಾರ, ಅಭಿಮಾನಿಗಳೆ ಬಂಧುಮಿತ್ರರು..” ಅಂತ ಬರೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment