ರಾಮ್ ಚರಣ್ ಗೆ ಈ ನಟಿ ಅಂದ್ರೆ ತುಂಬಾ ಇಷ್ಟ..! ನಟನ ಫಸ್ಟ್ ಕ್ರಶ್ ಈ ಸುಂದರಿ
Ram charan crush : ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಗ್ಲೋಬಲ್ ಲೆವೆಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಮೂಲಕ ವಿಶ್ವ ಮಟ್ಟದ ನಟನಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ನಾಯಕನಿಗೆ ಈ ಸ್ಟಾರ್ ಹೀರೋಯಿನ್ ಅಂದ್ರೆ ತುಂಬಾ ಇಷ್ಟವಂತೆ.. ಯಾರು ಆ ನಟಿ .? ಬನ್ನಿ ತಿಳಿಯೋಣ..
ಹೌದು…. ಸಂದರ್ಶನವೊಂದರಲ್ಲಿ ರಾಮ್ ತಮ್ಮ ಮೊದಲ ಕ್ರಶ್ ಯಾರು ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ಚರಣ್ ಹೃದಯ ಕದ್ದ ಆ ಚೆಲುವೆ ಯಾರು ಅಂತ ತಿಳಿಯಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಯುಎಸ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನಟಿಯರಲ್ಲಿ ನಿಮ್ಮ ಕ್ರಶ್ ಯಾರು.? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಹಾಲಿವುಡ್ ನಾಯಕಿ ಜೂಲಿಯಾ ರಾಬರ್ಟ್ಸ್ (Julia Roberts) ಎಂದರೆ ನನಗೆ ತುಂಬಾ ಇಷ್ಟ ಎಂದು ಚರಣ್ ಹೇಳಿದ್ದಾರೆ.
ಅಲ್ಲದೆ, ಆಕೆ ತೆರೆಯ ಮೇಲೆ ಬಂದರೆ ಸಾಕು ಕಣ್ಣು ಮುಚ್ಚದಂತೆ ನೋಡುತ್ತಲೇ ಇರುತ್ತೇನೆ ಎಂದು ಚರಣ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ‘ಪ್ರಿಟಿ ವುಮನ್’ ಸಿನಿಮಾ ನೋಡಿದ ನಂತರ ಜೂಲಿಯಾ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದು ಹೇಳಿದರು.. ಇನ್ನು ನಟಿ ಕ್ಯಾಥರೀನ್ ಝೀಟಾ ಜೋನ್ಸ್ ಸಹ ಇಷ್ಟ ಎಂದು ರಾಮ್ ಹೇಳಿಕೊಂಡಿದ್ದಾರೆ.
ಸಧ್ಯ ನಟ ರಾಮ್ ಚರಣ್ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ನಂತರ ರಾಮ್ ಉಪ್ಪೇನ ಖ್ಯಾತಿಯ ಬುಚ್ಚಿಬಾಬು ಜೊತೆ ರಾಮ್ ಚರಣ್ ತಮ್ಮ 16ನೇ ಸಿನಿಮಾ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment