ಸರ್ಕಾರದ ಕೈಲಾಗದನ್ನು ಮಾಡಿ ತೋರಿಸಿದ ನಟ..! ಸ್ವಂತ ಹಣದಲ್ಲಿ ರೈತರಿಗೆ ಉಚಿತ ಟ್ರ್ಯಾಕ್ಟರ್ ನೀಡಿದ ಲಾರೆನ್ಸ್
Raghava lawrence tractor gifts : ಚಿತ್ರರಂಗದಲ್ಲಿ ಕೆಲವೇ ಕೆಲವು ನಟರು ತಮ್ಮನ್ನ ಜನ ಸಾಮಾನ್ಯರಿಗೆ ಮೀಸಲಿಟ್ಟಿದ್ದಾರೆ. ಈ ಪೈಕಿ ನಟ ರಾಘವ ಲಾರೆನ್ಸ್ ಕೂಟ ಒಬ್ಬರು. ಲಾರೆನ್ಸ್ ಸಿನಿಮಾ ಅಷ್ಟೆ ಅಲ್ಲ, ತಮ್ಮ ಸಮಾಜ ಮುಖಿ ಕೆಲಸಗಳಿಂದ ಜನರ ಹೃದಯ ಗೆದ್ದ ನಟ. ಇವರಂದ್ರೆ ಹಲವಾರು ಜನರಿಗೆ ಅಚ್ಚುಮೆಚ್ಚು. ಇದೀಗ ಒಂದು ಸರ್ಕಾರವೂ ಮಾಡದಂತ ಕೆಲಸವನ್ನು ನಟ ಮಾಡಿ ತೋರಿಸಿದ್ದಾರೆ..
ಹೌದು.. ನೃತ್ಯ ಸಂಯೋಜಕ, ನಾಯಕ ನಟ, ನಿರ್ದೇಶಕ ರಾಘವ್ ಲಾರೆನ್ಸ್, ಎಲ್ಲದರಲ್ಲೂ ತಮ್ಮದೇ ಪ್ರಖ್ಯಾತಿ ಪಡೆದಿರುವ ಪರಿಪೂರ್ಣ ವ್ಯಕ್ತಿ. ಇತರರಿಗೆ ಸಹಾಯ ಮಾಡುವಲ್ಲಿ ಸದಾ ಮುಂದಾಳತ್ವ ವಹಿಸುವ ಸಹೃದಯಿ. ಈದೀಗ ರಾಘವ್ ತಮ್ಮ ಚಾರಿಟಿ ಮೂಲಕ ಮಾಡಿರುವ ಕಾರ್ಯ, ಜನ ಮನ ಗೆದ್ದಿದೆ.
ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ, ಲಾರೆನ್ಸ್ ರೈತರಿಗೆ ಉಚಿತವಾಗಿ 10 ಟ್ರ್ಯಾಕ್ಟರ್‌ಗಳನ್ನು ಹಸ್ತಾಂತರಿಸಿದ್ದಾರೆ. ನಟನ ಈ ನಿಸ್ವಾರ್ಥ ಸೇವೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಟ್ಟಿಗೆ ಲಾರೆನ್ಸ್ ‘ಸೇವೆಯೇ ದೇವರು’ ಎಂಬ ಘೋಷವಾಕ್ಯವನ್ನು ಇಟ್ಟುಕೊಂಡು ತಮ್ಮ ಟ್ರಸ್ಟ್ ಮೂಲಕ ರೈತರಿಗೆ ಉಚಿತ ಟ್ರ್ಯಾಕ್ಟರ್ ನೀಡಿದ್ದಾರೆ. ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲಾರೆನ್ಸ್ ವೀಡಿಯೊದಲ್ಲಿ, “ಈ ವಿಶೇಷ ಕಾರ್ಮಿಕ ದಿನದಂದು, ನಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಸೇವೆಯೇ ದೇವರು ಎಂಬ ಘೋಷ ವಾಕ್ಯದೊಂದಿಗೆ ಈ ವಿಶೇಷ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಆರಂಭದಲ್ಲಿ ನಮ್ಮ ದೇಶದ ಬೆನ್ನೆಲುಬಾಗಿರುವ ರೈತರಿಗೆ ನನ್ನ ಸ್ವಂತ ಹಣದಲ್ಲಿ 10 ಟ್ರ್ಯಾಕ್ಟರ್ ನೀಡುತ್ತಿದ್ದೇನೆ. ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸಲು ಪ್ರತಿಯೊಬ್ಬರೂ ಈ ನಿಸ್ವಾರ್ಥ ಪ್ರಯಾಣವನ್ನು ಬೆಂಬಲಿಸಬೇಕು. ಮಾತಿಗಿಂತ ಕೆಲಸ ಜೋರಾಗಿ ಮಾತನಾಡುತ್ತವೆ. ನನ್ನ ಪ್ರಯಾಣದಲ್ಲಿ ನನಗೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬಹಳ ಮುಖ್ಯ. ಇಂದಿನಿಂದ ಸೇವೆ ಆರಂಭವಾಗಿದೆ’ ಎಂದು ಲಾರೆನ್ಸ್ ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟಿಜನ್‌ಗಳು ರಾಘವ ಲಾರೆನ್ಸ್‌ಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ಇದೇ ವೇಳೆ ಕಳೆದ ಕೆಲ ತಿಂಗಳ ಹಿಂದೆ ಲಾರೆನ್ಸ್ ದ್ವಿಚಕ್ರ ವಾಹನಗಳನ್ನು ಖರೀದಿಸಿ ತ್ರಿಚಕ್ರ ವಾಹನಗಳನ್ನಾಗಿ ಪರಿವರ್ತಿಸಿ ಕೆಲ ಅಂಗವಿಕಲರಿಗೆ ನೀಡಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿತ್ತು.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment