ಬ್ರಿಜ್ ಭೂಷಣ್‌ನಿಂದ ಪ್ರಜ್ವಲ್ ವರೆಗೆ ಎಲ್ಲ ಕಾಮುಕರು “ಮೋದಿ ಪಾರ್ಟಿ” ಸೇರುತ್ತಿದ್ದಾರೆ : ನಟ ಪ್ರಕಾಶ್ ರಾಜ್
Prakash Raj on Prajwal Revanna case: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. ವಿದೇಶಕ್ಕೆ ತೆರಳಿರುವ ಪ್ರಜ್ವಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಸಹ ಜಾರಿ ಮಾಡಿದೆ. ಇದೀಗ ಈ ಪ್ರಕರಣದ ಕುರಿತ ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ ರಾಜ್ ಗುಡುಗಿದ್ದಾರೆ.
ಈ ಕುರಿತ ಗದಗ ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಬ್ರಿಜ್ ಭೂಷಣ್‌ನಿಂದ ಹಿಡಿದು ಪ್ರಜ್ವಲ್‌ವರೆಗೆ ಎಲ್ಲ ಕಾಮುಕರು ಯಾಕೆ ನಿನ್ನ ಪಾರ್ಟಿಯಲ್ಲಿ ಸೇರುತ್ತಿದ್ದಾರೆ..? ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಏಕ ವಚನದಲ್ಲೇ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು.
ಅಲ್ಲದೆ ಪ್ರಜ್ವಲ್‌ಗೂ ನನಗೂ ಸಂಬಂಧ ಇಲ್ಲ.. ಅವನು ನನ್ನ ಅಣ್ಣನ ಮಗ ಅಂತ ಕುಮಾರಸ್ವಾಮಿ ಹೇಳುತ್ತಾರೆ.. ಇದೇ ಕುಮಾರಸ್ವಾಮಿ ವೇದಿಕೆ ಮೇಲೆ ಪ್ರಜ್ವಲ್ ತಮ್ಮ ಮಗ ಇದ್ದಂತೆ ಅಂತ ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ..? ಅಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಕಾಶ್ ರಾಜ್ ಕಿಡಿಕಾರಿದರು.
ಇನ್ನು, ಉಚಿತ ಬಸ್ ಯೋಜನೆಯಿಂದ ಹೆಣ್ಣಮಕ್ಕಳು ದಾರಿ ತಪ್ಪುತ್ತಿದ್ದಾರೆ ಅಂತ ಇವರು ಹೇಳ್ತಾರೆ, ದಾರಿ ತಪ್ಪೋದು ಅಂದರೆ ಏನು ಅರ್ಥ ಅಂತ ಗೊತ್ತೆ ನಿಮಗೆ.? ಇವಾಗ ನಿನ್ನ ಮನೆ ಮಗ ದಾರಿ ತಪ್ಪಿದ್ದಾನಲ್ಲ… ಅವನು ಎಲ್ಲಿದ್ದಾನೆ ಹೇಳು..? ಎಂದು ರಾಜ್ ಪ್ರಶ್ನಿಸಿದ್ದಾರೆ.
Share this content:
Post Comment