ತಮನ್ನಾ ಮೇಕಪ್ ಇಲ್ಲದ ಮುಖ ನೋಡಿ.. ಓ.. ಹೆಣ್ಮಗು.. ಹೆಣ್ಮಗು.. ಎಂದ ನೆಟ್ಟಿಗರು..!
Tamannaah Bhatia Aranmanai 4 : ಮಿಲ್ಕಿ ಬ್ಯೂಟಿ ನಟಿ ತಮನ್ನಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ,ತಮ್ಮ ಅಂದ, ನಟನೆಯ ಮೂಲಕ ದಕ್ಷಿಣ ಸಿನಿರಂಗದಲ್ಲಿ ಮಿಂಚಿದ ಸೂಪರ್ ಸ್ಟಾರ್ ನಟಿ. ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮನ್ನಾ ಮೇಕಪ್ ಇಲ್ಲದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ತಮನ್ನಾ ಹಂಚಿಕೊಳ್ಳುವ ಫೋಟೋ ಮತ್ತು ವೀಡಿಯೋಗಳು ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಈ ಪೈಕಿ ನಟಿ ಹಂಚಿಕೊಂಡಿರುವ ಕೆಲ ಚಿತ್ರಗಳು ಹೈಪ್ ಕ್ರಿಯೇಟ್ ಮಾಡುತ್ತಿವೆ.ಸದ್ಯ ತಮನ್ನಾ ನಟ ಸುಂದರ್ ಸಿ ನಿರ್ದೇಶನದ ಅರನ್ಮನೈ 4 ಎಂಬ ತಮಿಳು ಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರ ಮೇ 3 ರಂದು ಬಿಡುಗಡೆಯಾಗಲಿದೆ. ಆದರೆ ಈ ಸಿನಿಮಾದ ಶೂಟಿಂಗ್ ಗೆ ಸಂಬಂಧಿಸಿದ ಕೆಲ ಫೋಟೋಗಳನ್ನು ಈ ನಟಿ ಶೇರ್ ಮಾಡಿದ್ದು ಆ ಚಿತ್ರಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ವಿಥೌಟ್ ಮೇಕಪ್ ತಮನ್ನಾ ಕಂಡು ಮಿಲ್ಕಿ ಬ್ಯೂಟಿಗೆ ವಯಸ್ಸಾಗ್ತಿದೆ ಅಂತ ಕೆಲವರು ಕಾಮೆಂಟ್ ಮಾಡಿದ್ರೆ ಇನ್ನೂ ನ್ಯಾಚುರಲ್ ಬ್ಯೂಟಿ ಅಂತ ಹೊಗಳಿದ್ದಾರೆ.
ಸಿನಿಮಾಗಳ ಜೊತೆ ವೆಬ್ ಸಿರೀಸ್‌ನಲ್ಲಿಯೂ ಬ್ಯುಸಿಯಾಗಿರುವ ನಟಿ ಲಸ್ಟ್ ಸ್ಟೋರೀಸ್ 2 ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ತಮನ್ನಾ ಹಸಿಬಿಸಿ ದೃಶ್ಯಗಳ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನಟಿ ಮೊದಲ ಬಾರಿಗೆ ತಮ್ಮ ರೂಲ್ಸ್ ಬ್ರೇಕ್ ಮಾಡಿ ಕಿಸ್ ಸೀನ್ ನಲ್ಲಿ ನಟಿಸಿದ್ದರು.
ಇನ್ನು ಬಾಲಿವುಡ್ ನಟ ವಿಜಯ್ ವರ್ಮಾ ಹಾಗು ತಮನ್ನಾ ಡೇಟಿಂಗ್ ಮಾಡುತ್ತಿದ್ದು ಶೀಘ್ರವೇ ಈ ಜೋಡಿ ಮದುವೆಯಾಗಲಿವೆ ಅಂತ ಹೇಳಲಾಗುತ್ತಿದೆ. ಅಲ್ಲದೆ ಆಗಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯ ನಟಿ ತಮಿಳು ಅರನ್ಮನೈ 4 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Share this content:
Post Comment