Loading Now

ಹಿಂದೂಗಳಷ್ಟೇ ಅಲ್ಲ ಮುಸ್ಲಿಂರೂ “ಅಯೋಧ್ಯೆ ರಾಮ ಮಂದಿರ” ಕಟ್ಟಿದ್ದಾರೆ : ಬಿಜೆಪಿ ವಿರುದ್ಧ ಗುಡುಗಿದ ಒಂಟಿ ಸಲಗ

ಹಿಂದೂಗಳಷ್ಟೇ ಅಲ್ಲ ಮುಸ್ಲಿಂರೂ “ಅಯೋಧ್ಯೆ ರಾಮ ಮಂದಿರ” ಕಟ್ಟಿದ್ದಾರೆ : ಬಿಜೆಪಿ ವಿರುದ್ಧ ಗುಡುಗಿದ ಒಂಟಿ ಸಲಗ

Duniya Vijay campaign for geetha shivarajkumar : ಲೋಕಸಭಾ ಚುನಾವಣೆ 3ನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಮೇ 7 ರಂದು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಚುನಾವಣೆ ನಡೆಯಲಿದೆ.

ಇದೇ ವೇಳೆ ಬಿಜೆಪಿ ವಿರುದ್ಧ ಸ್ಯಾಂಡಲ್‌ವುಡ್‌ ತೋಡೆ ತಟ್ಟಿದ್ದು ಗೀತಾ ಶಿವರಾಜ್ ಕುಮಾರ ಪರ ನಟ ನಟಿಯರು ಪ್ರಚಾರ ಮಾಡುತ್ತಿದ್ದಾರೆ. ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು ಸಂಪೂರ್ಣ ಚಿತ್ರರಂಗ ಶಿವಣ್ಣ ಮಡದಿ ಪರ ಪ್ರಚಾರಕ್ಕೆ ಧುಮುಕಿದೆ.

ನಟರಾದ ದುನಿಯಾ ವಿಜಯ್, ಚಿಕ್ಕಣ್ಣ, ಆಂಕರ್ ಅನುಶ್ರೀ ಗೀತಾ ಅವರ ಪರ ಮತಯಾಚನೆ ನಡೆಸುತ್ತಿದ್ದಾರೆ. ನಟ ದುನಿಯಾ ವಿಜಯ್ ಗೀತಾ ಶಿವರಾಜ್‌ಕುಮಾರ್ ಪರ ಶಿವಮೊಗ್ಗದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಇದೇ ವೇಳೆ ವಿಜಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ಪಕ್ಷ ಹಿಂದೂ- ಮುಸ್ಲಿ ನಡುವಿನ ಬಾಂಧವ್ಯವನ್ನು ಒಡೆದು ಹಾಕು ಯತ್ನಿಸುತ್ತಿದೆ. ಎರಡು ಜಾತಿಗೆ ನಡುವೆ ಜಗಳ ತಂದಿಡುತ್ತಿದ್ದಾರೆ. ನೀವು ಏನು ರಾಮಮಂದಿರ ಎನ್ನುತ್ತೀರಾ? ಅದಕ್ಕೆ ಇಟ್ಟಿಗೆ ಕೊಟ್ಟವರಲ್ಲಿ ನಾವು. ಅದಕ್ಕೆ ಕೆಲಸ ಮಾಡಿದವರಲ್ಲಿ ಮುಸಲ್ಮಾನರೂ ಕೂಡ ಇದ್ದಾರೆ. ರಾಮನ ಸೇವೆಯನ್ನು ಮುಸಲ್ಮಾನರು ಸಹ ಮಾಡಿದ್ದಾರೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

ಬಿಜೆಪಿಗರು ಒಗ್ಗಟ್ಟು ಒಡೆಯಲು ಪದೇ ಪದೆ ಹಿಂದೂ- ಮುಸ್ಲಿಂ ನಡುವೆ ತಂದಿಡಲು ನೋಡುತ್ತಿದ್ದಾರೆ. ಹಾಗಾಗಿ ನೀವು ತುಂಬಾ ಎಚ್ಚರದಿಂದ ಇರಬೇಕು ಎಂದು ದುನಿಯಾ ವಿಜಯ್ ಹೇಳಿದರು.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed