ಈಗ ಹೇಗಿದ್ದಾಳೆ ಗೊತ್ತೆ “ಬಂಟಿ ನಿನ್ನ ಸೋಪು ಸ್ಲೋನಾ” ಎನ್ನುತ್ತಿದ್ದ ಹುಡುಗಿ..!
Avneet Kaur : ಟಿವಿಯಲ್ಲಿ ಸೀರಿಯಲ್, ಸಿನಿಮಾಗಳ ನಡುವೆ ಎಂಟ್ರಿ ಕೊಟ್ಟು “ಬಂಟಿ ನಿಮ್ಮ ಸೋಪು ಸ್ಲೋನಾ” ಅಂತ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲ ನಟಿ ಇದೀಗ ಬೆಳೆದು ದೊಡ್ಡವಳಾಗಿದ್ದಾಳೆ. ಅಷ್ಟೆ ಅಲ್ಲ ಸಖತ್ ಹಾಟ್ ರೂಪ ತಾಳಿರುವ ನಟಿ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾಳೆ..
ಅವನೀತ್ ಕೌರ್ ಲೈಫ್ ಬಾಯ್ ಹ್ಯಾಂಡ್‌ವಾಶ್‌ನ ಜಾಹೀರಾತಿನಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಪುಟ್ಟ ಪೋರಿ.. ಇದೀಗ ಬೆಳೆದು ದೊಡ್ಡವಳಾಗಿದ್ದಾಳೆ. ಅಷ್ಟೇ ಅಲ್ಲ ತನ್ನ ಅಪರೂಪದ ಸೌಂದರ್ಯದಿಂದ ಪಡ್ಡೆ ಹುಡುಗರ ಮನ ಕದಿಯುತ್ತಿದ್ದಾಳೆ..
ಬಾಲ ನಟಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ಸದ್ಯ ಟಿವಿ ಶೋ, ಧಾರಾವಾಹಿ, ಸಿನಿಮಾ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾಳೆ. ಅಲ್ಲದೆ ‘ಮರ್ದಾನಿ’ ‘ಟಿಕು ವೆಡ್ಸ್ ಶೇರು’, ‘ಖರೀಬ್ ಖರೀಬ್ ಸಿಂಗಲೇ’, ‘ಮರ್ದಾನಿ 2’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
22 ವಯಸ್ಸಿನ ಅವನೀತ್ ಕೌರ್ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು ಆಗಾಗ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡು ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾಳೆ..
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ ಅವನೀತ್ ಸದ್ಯ ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.. ಸುಂದರಿಯ ಸೌಂದರ್ಯ ಕಂಡು ನೆಟ್ಟಿಗರು ಹೇಗಿದ್ದವಳು ಹೇಗಾದ್ಲು ಗುರು ಅಂತ ಕಾಮೆಂಟ್ ಮಾಡುತ್ತಿದ್ದಾರೆ..
Share this content:
Post Comment