ಆ ಪೆನ್ ಡ್ರೈವ್ ನಲ್ಲಿ ನಂದು ಒಂದು ವಿಡಿಯೋ ಇದೆ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟ ಪ್ರಥಮ್
Bigg Boss Pratham : ಸಂಸದ ರೇವಣ್ಣ ವಿಡಿಯೋ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ವಿಡಿಯೋಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಲೇ ಇದೆ. ಅಲ್ಲದೆ, ಸರ್ಕಾರ ಈ ಕುರಿತು ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿದೆ. ಇದೇ ವೇಳೆ ಬಿಗ್ ಬಾಸ್ ವಿನ್ನರ್, ನಟ ಪ್ರಥಮ್ ಸ್ಫೋಟಕ ವಿಚಾರವೊಂದನ್ನ ಬಹಿರಂಗ ಪಡಿಸಿದ್ದಾರೆ.
ಹೌದು… ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದಿನದಿಂದ ದಿನಕ್ಕೆ ಸಾಕಷ್ಟು ಕಾವು ಪಡೆದುಕೊಳ್ಳುತ್ತಿದೆ. ಇದು ಭಾರತ ಕಂಡ ಅತ್ಯಂತ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಅಂತ ಹೇಳಬಹುದು. ಸುಮಾರು 2000 ಕ್ಕೂ ಹೆಚ್ಚು ವಿಡಿಯೋಗಳು ಹೊರಬರುತ್ತಿವೆ. ಈಗಾಗಲೇ ಕೆಲವು ಮಹಿಳೆಯರು ಪ್ರಜ್ವಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನು ಇದೇ ವೇಳೆ ನಟ ಪ್ರಥಮ್ ತಮ್ಮ ಮುಂಬರುವ ಸಿನಿಮಾ “ಕರ್ನಾಟಕ ಅಳಿಯ” ಪ್ರಚಾರದ ಭಾಗವಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸದ್ಯ ಸುದ್ದಿಯಲ್ಲಿರುವ ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿದ್ದಾರೆ. “ಇದೆ ಪೆನ್ ಡ್ರೈವ್ ಅಲ್ವಾ.. ಇದರಲ್ಲಿ ನಂದು ನನ್ನ ಹಿರೋಯಿನ್ ವಿಡಿಯೋ ಇದೆ..” ಅಂತ ತಮ್ಮ ಮುಂಬರುವ ಸಿನಿಮಾದ ಸಾಂಗ್ ರಿಲೀಸ್ ಆಗಿದ್ದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಅಲ್ಲದೆ ಪೆನ್ ಡ್ರೈವ್ ನಲ್ಲಿರುವ ವಿಡಿಯೋ ಯೂಟ್ಯೂಬ್ ನಲ್ಲಿದೆ ನೋಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ಪ್ರಚಲಿತ ವಿದ್ಯಮಾನವನ್ನು ಬಳಸಿಕೊಂಡು ತಮ್ಮ ಸಿನಿಮಾ ಪ್ರಚಾರ ಮಾಡಿದ ಪ್ರಥಮ್ ಚಾಣಕ್ಷತನಕ್ಕೆನೆಟ್ಟಿಗರು ಫಿದಾ ಆಗಿದ್ದು.. ಸೂಪರ್.. ಸರ್.. ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಸಧ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Share this content:
Post Comment