ಅಪರೂಪದ ಕಾಯಿಲೆಗೆ ತುತ್ತಾದ ಬಿಗ್ ಬಾಸ್ ಬ್ಯೂಟಿ..! ಆಸ್ಪತ್ರೆ ಹಾಸಿಗೆ ಮೇಲೆ ಖ್ಯಾತ ನಟಿ
Bigg Boss Geetu Royal: ತೆಲುಗು ಬಿಗ್ ಬಾಸ್ ಖ್ಯಾತಿಯ ಗೀತು ರಾಯಲ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಟ ಖಿನ್ನತೆಗೂ ಒಳಗಾಗಿದ್ದಾರೆ. ಇದರೊಂದಿಗೆ ಗೀತು ಆರ್ಥಿಕ ಸಮಸ್ಯೆ ಕೂಡ ಎದುರಿಸುತ್ತಿದ್ದಾರೆ.
ಈ ಕುರಿತು ಯುಟ್ಯೂಬ್ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿರುವ ಅವರು, ಪ್ರವಾಸದಿಂದ ಬಂದ ನಂತರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಆವಾಗಿನಿಂದ ಸರಿಯಾಗಿ ಆಹಾರ ಸೇರುತ್ತಿಲ್ಲ. ವಿಪರೀತ ತಲೆ ನೋವು, ವಾಂತಿ ಶುರುವಾಯಿತು. ಇದಕ್ಕಾಗಿ ಚಿಕಿತ್ಸೆ ತೆಗೆದುಕೊಂಡರು ಸಹ ಏನೂ ಪ್ರಯೋಜನ ಆಗ್ತಾನೇ ಇಲ್ಲ ಎಂದು ಗೀತು ಹೇಳಿಕೊಂಡಿದ್ದಾರೆ.
ಹಲವು ಆರೋಗ್ಯ ಪರೀಕ್ಷೆಗಳ ನಂತರ ನನಗೆ ಮೈಕೋಬ್ಯಾಕ್ಟೀರಿಯಲ್ ನಾನ್ ಟ್ಯೂಬರ್ಕುಲ್ ಸೋಂಕು ಇದೆ ಎನ್ನುವುದು ತಿಳಿಯಿತು. ಇದನ್ನ ಟಿಬಿ ಅಂತಲೂ ಕರೆಯುತ್ತಾರೆ. ಈ ಸೋಂಕು ನಿವಾರಣೆಯಾಗಲು ಎರಡು ವರ್ಷ ಪ್ರತಿ ದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ ಎಂದು ಗೀತು ತಮ್ಮ ಆರೋಗ್ಯ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.
ಸಧ್ಯ ಗೀತು ರಾಯಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಅಭಿಮಾನಿಗಳು ಬೇಗ ಚೇತರಿಸಿಕೊಳ್ಳಿ ಅಂತ ಕಾಮೆಂಟ್ ಮೂಲಕ ಕೋರಿಕೊಳ್ಳುತ್ತಿದ್ದಾರೆ. ಗೀತಾ ಜಬರದಸ್ತ್ ಕಾರ್ಯಕ್ರಮದ ಮೂಲಕ ಆಗಾಗ ಕಿರುತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದರು.
Share this content:
Post Comment