Loading Now

ಪ್ರಾಣಿಗಳೂ ಸಹ ಸಂಸದ ಪ್ರಜ್ವಲ್ ರೇವಣ್ಣನಂತೆ ಮಾಡುವುದಿಲ್ಲ: ನಟಿ ಪೂನಂ ಕೌರ್

ಪ್ರಾಣಿಗಳೂ ಸಹ ಸಂಸದ ಪ್ರಜ್ವಲ್ ರೇವಣ್ಣನಂತೆ ಮಾಡುವುದಿಲ್ಲ: ನಟಿ ಪೂನಂ ಕೌರ್

Poonam Kaur on Prajwal Revanna: ಟಾಲಿವುಡ್‌ ನಟಿ ಪೂನಂ ಕೌರ್ ದೇಶದಲ್ಲಿ ಜರುಗುವಾಗ ಎಲ್ಲಾ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಿದ್ದಾರೆ. ಚಿತ್ರರಂಗದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮಾತ್ರವಲ್ಲದೆ ರಾಜಕೀಯದಲ್ಲಿ ನಡೆಯುವ ಸಮಸ್ಯೆಗಳ ಬಗ್ಗೆಯೂ ನಟಿ ಪ್ರತಿಕ್ರಿಯೆ ನೀಡುತ್ತಾರೆ. ಇದೀಗ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಹೌದು… ಜೆಡಿಎಸ್ ಯುವ ಮುಖಂಡ ಹಾಗೂ ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಜ್ವಲ್ 2,000 ಕ್ಕೂ ಹೆಚ್ಚು ಮಹಿಳೆಯರು ಮತ್ತು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಈ ವಿಚಾರದ ಕುರಿತು ನಟಿ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪೂನಂ ಕೌರ್ ಪ್ರತಿಕ್ರಿಯಿಸಿದ್ದಾರೆ.

ಪ್ರಜ್ವಲ್ ರೇವಣ್ಣ 2,800 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಒತ್ತಾಯ ಪೂರ್ವಕವಾಗಿ ವಿಡಿಯೋ ಮಾಡಿದ್ದಾರೆ . ಹಣ, ಅಧಿಕಾರ ಎರಡನ್ನೂ ಹೊಂದಿರುವವರಿಗೆ ಸರ್ಕಾರ ಏನೂ ಮಾಡಿಲ್ಲ ಅಂತ ಅವರು, ಈಗ ಜರ್ಮನಿಯಲ್ಲಿ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ, ಅವನಿಗೆ ಶಿಕ್ಷೆಯಾಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮೆಲ್ಲರನ್ನೂ ಕೈಮುಗಿದು ಪ್ರಾರ್ಥಿಸುತ್ತೇನೆ. ಹೆಣ್ಣುಮಕ್ಕಳು ಮತ್ತು ನಿಮ್ಮ ಸಹೋದರಿಯರ ಮೇಲೆ ಪ್ರೀತಿ ಇದ್ದವರಿಗೆ ದಯವಿಟ್ಟು ಮತ ನೀಡಿ.. ಆದರೆ ಇಂತಹ ಮಹಿಳೆಯರನ್ನು ನಿಂದಿಸುವ ಮತ್ತು ಮಹಿಳೆಯರನ್ನು ಅಗೌರವಿಸುವವರಿಗೆ ಮತ ಹಾಕಬೇಡಿ.. ಮಹಿಳೆಯರ ರಕ್ಷಣೆ ಮಾಡುವವರಿಗೆ ಮತ ಹಾಕಿ.. ಇದು ಪ್ರತಿಯೊಬ್ಬರ ಕರ್ತವ್ಯ. ಅನ್ಯಾಯ ಮಾಡುವವರಿಗೆ ಅಧಿಕಾರ ಕೊಡಬೇಡಿ ಎಂದು ಪೂನಂ ಮನವಿ ಮಾಡಿದ್ದಾರೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿದ ಪ್ರಜ್ವಲ್ ರೇವಣ್ಣನವರನ್ನು ಯಾವುದೇ ಕಾರಣಕ್ಕೆ ಬಿಡಬೇಡಿ.. ಪ್ರಾಣಿಗಳೂ ಸಹ ಇಂತಹ ಕೃತ್ಯ ಮಾಡುವುದಿಲ್ಲ.. ಈ ದೇಶ ರಾವಣ ರಾಜ್ಯವಾಗುತ್ತಿದಿಯೇ? ಎಂದು ಪೂನಂ ಕೌರ್ ಬೇಸರ ವ್ಯಕ್ತಪಡಿಸಿದರು.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed