ಜೈ ಹನುಮಾನ್ ಸಿನಿಮಾದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ “ಆಂಜನೇಯ”..!
Prasanth varma Ranveer singh : ಹನುಮಾನ್ ಪ್ರಶಾಂತ್ ವರ್ಮಾ ನಿರ್ದೇಶನದ ಯಂಗ್ ಹೀರೋ ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ. ಇದೀಗ ಈ ಸಿನಿಮಾದ ಮುಂದಿನ ಭಾಗ “ಜೈ ಹನುಮಾನ್” (Jai Hanuman) ತೆರೆಗೆ ಬರಲುರೆಡಿಯಾಗುತ್ತಿದೆ. ಇದೇ ವೇಳೆ ಈ ಸಿನಿಮಾಗೆ ಸಂಬಂಧಿಸಿ ಬಿಗ್ ಅಪ್ ಡೇಟ್ ಒಂದು ಕೇಳಿ ಬಂದಿದೆ.
ಹೌದು. ಜೈ ಹನುಮಾನ್ ಸಿನಿಮಾದಲ್ಲಿ ಶ್ರೀರಾಮ ಬಂಟ ಮಾರುತಿ ಪಾತ್ರ ಬಹಳ ಪ್ರಭಾವಿತವಾದದ್ದು. ಈ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರ ಕುತೂಹಲ ಮೂಡಿಸುತ್ತಿದೆ. ಇತ್ತೀಚೆಗೆ ಆಂಜನೇಯ ಪಾತ್ರವನ್ನು ಮೆಗಾ ಸ್ಟಾರ್ ಚಿರಂಜೀವಿ ನಿರ್ವಹಿಸಲಿದ್ದಾರೆ ಎನ್ನು ಮಾತು ಕೇಳಿ ಬಂದಿತ್ತು. ಇದೀಗ ಈ ಪಾತ್ರವನ್ನು ನಟ ರಣವೀರ್ ಸಿಂಗ್ (Ranveer singh) ನಿರ್ವಹಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ನಿರ್ದೇಶಕ ಪ್ರಶಾಂತ್ ವರ್ಮಾ ಮುಂಬೈನಲ್ಲಿ ರಣವೀರ್ ಸಿಂಗ್ ಅವರನ್ನು ಭೇಟಿಯಾದರು. ಸದ್ಯ ಮುಂಬೈನಲ್ಲಿ ಈ ಕಾಂಬಿನೇಷನ್ ಚರ್ಚೆಯಾಗಿದೆ.ಕಳೆದ ಕೆಲವು ದಿನಗಳಿಂದ ರಣವೀರ್ ಶಕ್ತಿಮಾನ್ ಪಾತ್ರವನ್ನು ಹೋಲುವ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೀಗ ‘ಹನು-ಮಾನ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇವರಿಬ್ಬರ ಭೇಟಿ ಬಾಲಿವುಡ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಹನುಮಾನ್ ಪಾತ್ರವನ್ನು ರಣವೀರ್ ಮಾಡಲಿದ್ದಾರೆ ಎಂಬ ಕಥೆಗಳೂ ಮಾಧ್ಯಮಗಳಲ್ಲಿ ಬರುತ್ತಿವೆ. ಆದರೆ ಈ ಕುರಿತ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಪ್ ಡೇಟ್ಸ್ ಗಾಗಿ ಕಾಯ್ದು ನೋಡಬೇಕಿದೆ..
Share this content:
Post Comment