Loading Now

ಕುಮಾರಣ್ಣ ಎಲ್ಲಿ ನಿನ್ನ ‘ದಾರಿ ತಪ್ಪಿದ ಮಗ’..? ಒಸಿ ಹೇಳಪ್ಪ : ಪ್ರಕಾಶ ರಾಜ್ ಪ್ರಶ್ನೆ

ಕುಮಾರಣ್ಣ ಎಲ್ಲಿ ನಿನ್ನ ‘ದಾರಿ ತಪ್ಪಿದ ಮಗ’..? ಒಸಿ ಹೇಳಪ್ಪ : ಪ್ರಕಾಶ ರಾಜ್ ಪ್ರಶ್ನೆ

Prakash raj on Prajwal Revanna video case: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಅಲ್ಲದೆ, ಈಗಾಗಲೇ ಸಂಸದ ಪ್ರಜ್ವಲ್‌ ವಿರುದ್ಧ ದೂರುಗಳು ಸಹ ದಾಖಲಾಗಿವೆ. ಇದೀಗ ಇದೇ ವಿಚಾರವಾಗಿ ನಟ, ರಾಜಕಾರಣಿ ಪ್ರಕಾಶ್‌ ರಾಜ್‌ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.

ರಾಯಚೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್‌ ರಾಜ್‌, ಕಾಂಗ್ರೆಸ್‌ ಸರ್ಕಾರ ಹೆಣ್ಣುಮಕ್ಕಳಿಗೆ ಉಚಿತ ಬಸ್‌ ಕೊಟ್ಟು ಹೆಣ್ಮಕ್ಕಳ ದಾರಿ ತಪ್ಪಿಸುತ್ತಿದೆ ಅಂತ ಹೇಳಿದ್ರಿ, ಈಗ ನಿಮ್ಮ ದಾರಿ ತಪ್ಪಿದ ಮಗ ಮಾಡಿದ್ದೇನು? ಈಗ ಆತ ಎಲ್ಲಿದ್ದಾನೆ ಅಂತ ಸ್ವಲ್ಪ ಹೇಳಪ್ಪ ಎಂದು ಟೀಕೆ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅಷ್ಟೇ ಅಲ್ಲ ನೇಹಾ ಪ್ರಕರಣದಲ್ಲಿ ಇಷ್ಟೆಲ್ಲ ಮಾತನಾಡಿದ್ದ ನೀವು, ಈಗ ಆ ದಾರಿ ತಪ್ಪಿದ ಮಗನಿಂದಲೇ ಸಾವಿರಾರು ಹಿಂದೂ ಮಹಿಳೆಯರು ಹಾಳಾಗಿದ್ದಾರಲ್ಲ ಇದಕ್ಕೆ ನೀವು ಏನು ಉತ್ತರ ಕೊಡ್ತೀರಾ ಅಂತ ಹೆಚ್‌ಡಿಕೆ ಅವರಿಗೆ ಪ್ರಕಾಶ್‌ ರಾಜ್‌ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ.

ನೇಹಾ ಕೊಲೆ ಪ್ರಕರಣದಲ್ಲಿ ಇಷ್ಟೆಲ್ಲ ಮಾತನಾಡುವ ನೀವು, ಆ ಬಿಜೆಪಿಗರು, ಈಗ ಆ ದಾರಿ ತಪ್ಪಿದ ಮಗನಿಂದ ಹಾಳಾದ 2 ಸಾವಿರಕ್ಕೂ ಅಧಿಕ ಮಹಿಳೆಯರ ಕುರಿತು ಕನಿಕರ ಬರುತ್ತಿಲ್ಲವೋ, ಆಕ್ರೋಶ ಹುಟ್ಟುತ್ತಿಲ್ಲವೋ..? ಏಕೆ ಅವರೆಲ್ಲರೂ ಹಿಂದೂಗಳಲ್ಲವೋ? ಅಂತ ಪ್ರಕಾಶ್‌ ರಾಜ್‌ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

Share this content:

Post Comment

You May Have Missed