Loading Now

ಕೋಟ್ಯಂತರ ರೂ. ಬೆಲೆಬಾಳುವ ಐಶಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ಜೋಡಿ.!

ಕೋಟ್ಯಂತರ ರೂ. ಬೆಲೆಬಾಳುವ ಐಶಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ಜೋಡಿ.!

Haripriya Vasishta simha new car: ನಟಿ ಹರಿಪ್ರಿಯಾ (Haripriya ) ಹಾಗೂ ನಟ ವಸಿಷ್ಠ ಸಿಂಹ ( Vasishta simha ) ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದು. ಇತ್ತೀಚೆಗೆ ಈ ದಂಪತಿ ಕೋಟ್ಯಂತರ ರೂ. ಬೆಲೆಬಾಳುವ ಐಶಾರಾಮಿ ಕಾರು ಖರೀದಿ ಮಾಡಿದ್ದು ಫೋಟೋಸ್ ಹಂಚಿಕೊಂಡಿದ್ದಾರೆ.

ಹೌದು… ಸಿಂಹಪ್ರಿಯಾ ಜೋಡಿ ಹೊಸ ಮರ್ಸಿಡೀಸ್ ಬೆಂಜ್​ ಜಿಎಲ್​ಇ 450 ಡಿ ಕಾರು ಖರೀದಿಸಿದ್ದು, ಈ ಐಷಾರಾಮಿ ಕಾರನ್ನು ಖರೀದಿಸೋ ಸಂದರ್ಭದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಈ ಕಾರಿನ ಬೆಲೆ 1.20-1.40 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದರಲ್ಲಿ 1993 ಸಿಸಿ ಹಾಗೂ 2989 ಸಿಸಿ ಇಂಜಿನ್ ಬರುತ್ತದೆ. ಕಾರಿನ ಟಾಪ್ ಸ್ಪೀಡ್ 230 ಕಿ.ಮೀ ಆಗಿದೆ. ಆಟೋಮ್ಯಾಟಿಕ್ ಟ್ರಾನ್ಸ್​ಮೀಷನ್​ನ ಈ ಕಾರು ಹೊಂದಿದೆ. ಸಧ್ಯ ಜೋಡಿಗೆ ಅವರ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed