ಸೋನು ಸೂದ್ ವಾಟ್ಸಾಪ್ ಬ್ಲಾಕ್…! ಈ ತಪ್ಪು ಮಾಡಿದ್ರೆ ನಿಮ್ಮ ನಂಬರ್ ಸಹ ಬ್ಲಾಕ್ ಆಗುತ್ತೆ
Sonu Sood WhatsApp: ಹಲವಾರು ಕಾರಣಗಳಿಂದ ಮತ್ತು ನಿಯಮಗಳನ್ನು ಉಲ್ಲಂಘಿಸುವುದರಿಂದ ವಾಟ್ಸಾಪ್ ಬ್ಲಾಕ್ ಆಗುತ್ತದೆ. ಅದು ಜನಸಾಮಾನ್ಯರಿರಲಿ ಸ್ಟಾರ್ ನಟ ನಟಿಯರೇ ಆಗಿರಲಿ ಎಲ್ಲರಿಗೂ ಒಂದೇ ರೂಲ್ಸ್. ಇದೀಗ ಬಹುಭಾಷಾ ನಟ ಸೋನು ಸೂದ್ ವಾಟ್ಸಾಪ್ ಬ್ಲಾಕ್ ಆಗಿದ್ದು ಈ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ, ನನ್ನ ವಾಟ್ಸಾಪ್‌ನಲ್ಲಿ ನಂಬರ್ ಬ್ಲಾಕ್ ಆಗಿದೆ. ಈ ಸಮಸ್ಯೆಯನ್ನು ನಾನು ಹಲವು ಬಾರಿ ಎದುರಿಸಿದ್ದೇನೆ. ವಾಟ್ಸಾಪ್ ಅಪ್‌ಗ್ರೇಡ್ ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದರು. ಅಲ್ಲದೆ 61 ಗಂಟೆಗಳ ಬಳಿಕ ಅವರ ವಾಟ್ಸಾಪ್ ಸರಿ ಹೋಗಿದೆ ಎಂದು ತಿಳಿದು ಬಂದಿದೆ.
ವಾಟ್ಸಾಪ್ನ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ ನಿಮ್ಮ ಖಾತೆಯನ್ನು ಬ್ಯಾನ್ ಮಾಡುತ್ತದೆ. ವಾಟ್ಸಾಪ್ಗಾಗಿ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಬಳಸಬೇಡಿ. ಇದರಿಂದ ವಾಟ್ಸಾಪ್ ನಿರ್ಬಂಧಕ್ಕೆ ಒಳಗಾಗಬಹುದು. ವಾಟ್ಸಾಪ್‌ನಲ್ಲಿ ಅಶ್ಲೀಲ ಫೋಟೋ-ವಿಡಿಯೋ ಅಥವಾ ಬೆದರಿಕೆ ಮೆಸೇಜ್ ಕಳುಹಿಸುವುದು ನಿಯಮಗಳಿಗೆ ವಿರುದ್ಧವಾಗಿದೆ.
ನೀವು ಬೇರೆ ವ್ಯಕ್ತಿಯ ಮಾಹಿತಿಯೊಂದಿಗೆ ವಾಟ್ಸಾಪ್ ಖಾತೆಯನ್ನು ಕ್ರಿಯೇಟ್ ಮಾಡಿದರೆ ಅಂತಹ ಖಾತೆಯನ್ನು ನಿಷೇಧ ಮಾಡಬಹುದು. ಅಲ್ಲದೆ ಮೆಸೇಜ್ ಸ್ವೀಕರಿಸಿದ ವ್ಯಕ್ತಿ ನಿಮ್ಮ ಖಾತೆಯನ್ನು ರಿಪೋರ್ಟ್ ಮಾಡಿದರೂ ಸಹ ನಿಮ್ಮ ಅಕೌಂಟ್ ಬಂದ್. ಈ ಕಾರಣಗಳಿಂದ ವಾಟ್ಸಾಪ್ ಬ್ಲಾಕ್ ಆಗಬಹುದು ಎಚ್ಚರಿಕೆ..
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment