Loading Now

ಬಾಲ್ಕನಿಗೆ ಬಂದ್ರೆ ಸಲ್ಮಾನ್ ಖಾನ್‌ ಕೊಲೆ..! ಸಂಚಲನ ಮೂಡಿಸುತ್ತಿದೆ ರಾಖಿ ಹೇಳಿಕೆ

ಬಾಲ್ಕನಿಗೆ ಬಂದ್ರೆ ಸಲ್ಮಾನ್ ಖಾನ್‌ ಕೊಲೆ..! ಸಂಚಲನ ಮೂಡಿಸುತ್ತಿದೆ ರಾಖಿ ಹೇಳಿಕೆ

Rakhi Sawant : ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ಮನೆ ಹೊರಗಡೆ ನಡೆದ ಗುಂಡಿನ ದಾಳಿ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ಪೈಕಿ ಆರೋಪಿಗಳನ್ನೂ ಸಹ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣ ಕುರಿತು ನಟಿ ರಾಖಿ ಸಾವಂತ್‌ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.

ಹೌದು.. ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮುಂಬಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರು ಆನ್‌ಲೈನ್ ಪೋಸ್ಟ್‌ ನಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಇದು ಜಸ್ಟ್‌ ಟ್ರೇಲರ್‌ ಅಂತ ಸಲ್ಲು ಭಾಯ್‌ ಎಚ್ಚರಿಕೆ ನೀಡಿದ್ದರು.

ಇದೀಗ ಈ ಕುರಿತು ಮಾತನಾಡಿರುವ ಬಿಟೌನ್‌ ಮಾದಕ ನಟಿ ರಾಖಿ ಸಾವಂತ್ ಮನೆಯ ಬಾಲ್ಕನಿಗೆ ಬರದಂತೆ ಸಲ್ಮಾನ್ ಖಾನ್ ಅವರಿಗೆ ಸಲಹೆ ನೀಡಿದ್ದಾರೆ. ಸಲ್ಮಾನ್‌ ಭಾಯ್‌ ಎಂದಿಗೂ ನೀವು ನಿಮ್ಮ ಮನೆಯ ಬಾಲ್ಕನಿಗೆ ಬರಬೇಡಿ, ಈದ್‌ ಮತ್ತು ಇತರ ಹಬ್ಬಗಳಲ್ಲಿಯೂ ಸಹ ಬಾಲ್ಕಾನಿಗೆ ಕಾಲಿಡಬೇಡಿ ಎಂದು ರಾಖಿ ಮನವಿ ಮಾಡಿಕೊಂಡಿದ್ದಾಳೆ.

ಅಷ್ಟೇ ಅಲ್ಲದೆ, ಕೊಹಿನೂರ್‌ ಗಿಂತ ಸಲ್ಮಾನ್ ಖಾನ್ ಹೆಚ್ಚು ಮುಖ್ಯ, ಅದಕ್ಕಾಗಿ ಅವರ ಮನೆ ಮತ್ತು ಸುತ್ತಮುತ್ತ ಭದ್ರತೆ ಹಾಗೂ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕಿದೆ ಎಂದು ರಾಖಿ ಒತ್ತಾಯಿಸಿದ್ದಾಳೆ. ದುಬೈನಲ್ಲಿದ್ದ ರಾಖಿ ಇಂದು ಮುಂಬೈಗೆ ಬಂದಿದ್ದಾರೆ.

Share this content:

Post Comment

You May Have Missed