Loading Now

ಬಟ್ಟೆ ಬದಲಾಯಿಸುವಾಗ ಬಾಗಿಲು ಹಾಕಿಕೊಂಡು…! ನಿರ್ಮಾಪಕನ ಕಾಮಕಾಂಡ ಬಯಲು ಮಾಡಿದ ನಟಿ

ಬಟ್ಟೆ ಬದಲಾಯಿಸುವಾಗ ಬಾಗಿಲು ಹಾಕಿಕೊಂಡು…! ನಿರ್ಮಾಪಕನ ಕಾಮಕಾಂಡ ಬಯಲು ಮಾಡಿದ ನಟಿ

Krishna Mukherjee: ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಹಲವು ನಾಯಕಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಎದುರಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಇದೇ ಸಾಲಿಗೆ ಬಾಲಿವುಡ್ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ ಸೇರಿಕೊಂಡಿದ್ದಾರೆ.

ಹೌದು.. ಇತ್ತೀಚೆಗಷ್ಟೇ ಜನಪ್ರಿಯ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ ಕೂಡ ತಮ್ಮ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ. ಕೃಷ್ಣಾ ಮುಖರ್ಜಿ ನಿರ್ಮಾಪಕರೊಂದಿಗಿನ ಕಹಿ ಅನುಭವವನ್ನು ಬಹಿರಂಗ ಪಡಿಸಿದ್ದಾರೆ. ‘ಯೇ ಹೈ ಮೊಹಬ್ಬತೆ’ ಧಾರಾವಾಹಿಯಿಂದ ಖ್ಯಾತ ಗಳಿಸಿದ ನಟಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ನಟಿ ಧಾರಾವಾಹಿಯೊಂದರಲ್ಲಿ ನಿರ್ಮಾಪಕರೊಬ್ಬರು ಕಿರುಕುಳ ನೀಡಿದ್ದಾಗಿ ಎಂದು ಹೇಳಿಕೊಂಡಿದ್ದಾರೆ.

ಕೃಷ್ಣ ಮುಖರ್ಜಿ ಸದ್ಯ ‘ಶುಭ ಶಕುನ್’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇದೀಗ ಈ ಸೀರಿಯಲ್ ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಿರ್ಮಾಪಕ ಕುಂದನ್ ಸಿಂಗ್ ನೀಡಿದ ಕಿರುಕುಳ ಎಂದು ಸ್ವತಃ ನಟಿ ಹೇಳಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿರುವ ಅವರು, ‘ಇದನ್ನು ಬರೆಯುವಾಗ ನನ್ನ ಕೈಗಳು ನಡುಗುತ್ತಿದ್ದವು. ಆದರೆ ನಾನು ಬರೆಯಲೇಬೇಕು. ಅವರಿಂದಲೇ ನಾನು ಖಿನ್ನತೆಗೆ ಒಳಗಾಗಿದ್ದೆ. ನಾವು ನಮ್ಮ ಜೀವನದ ಕೆಟ್ಟ ಭಾಗವನ್ನು ಬದಿಗಿಟ್ಟು ನಮ್ಮ ಉತ್ತಮ ಜೀವನವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ತೋರಿಸುತ್ತೇವೆ. ಆದರೆ ವಾಸ್ತವ ಬೇರೆಯೇ ಇದೆ’ ಎಂದರು.

ಈ ಕುರಿತು ಪೋಸ್ಟ್ ಮಾಡಬೇಡ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಾನೇಕೆ ಹೆದರಬೇಕು? ನ್ಯಾಯ ಕೇಳುವುದು ನನ್ನ ಹಕ್ಕು’ ಎಂದು ನಿರ್ಮಾಪಕ ಕುಂದನ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಕಳೆದ ಒಂದೂವರೆ ವರ್ಷ ನನ್ನ ಪಾಲಿಗೆ ಅಷ್ಟು ಸಲೀಸಾಗಿ ಹೋಗಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೇನೆ. ದಂಗಲ್ ಟಿವಿಯಲ್ಲಿ ಶುಭ್ ಶಗುನ್ ಧಾರಾವಾಹಿಯನ್ನು ಒಪ್ಪಿಕೊಂಡಾಗಿನಿಂದ ಈ ಸಮಸ್ಯೆ ಇದೆ. ಧಾರಾವಾಹಿಯನ್ನು ಒಪ್ಪಿಕೊಳ್ಳುವುದು ತನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ ಪ್ರೊಡಕ್ಷನ್ ಹೌಸ್, ನಿರ್ಮಾಪಕ ಕುಂದನ್ ಸಿಂಗ್ ಆಕೆಗೆ ಕಿರುಕುಳ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಬಟ್ಟೆ ಬದಲಾಯಿಸುವಾಗ ಬಾಗಿಲು ಹಾಕಿಕೊಂಡು ಹಲವು ಬಾರಿ ಬೆದರಿಕೆ ಹಾಕಿದ್ದಾಗಿಯೂ ನಟ ಕೃಷ್ಣಾ ಅಳಲು ತೋಡಿಕೊಂಡಿದ್ದಾರೆ. ಆ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಸಂಭಾವನೆಯನ್ನೂ ನೀಡಿಲ್ಲ ಎಂದಿದ್ದಾರೆ.

Share this content:

Post Comment

You May Have Missed