ಫ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಮಿಂಚಿದ ʼನನ್ನರಸಿ ರಾಧೆʼ ಕೌಸ್ತುಭಾ ಮಣಿ..! ಫೋಟೋಸ್ ಇಲ್ಲಿವೆ
Kaustubha Mani : ಇತ್ತೀಚೆಗೆ ಜನ ಸಾಮಾನ್ಯರಿಂದ ಹಿಡಿದು ಸ್ಟಾರ್‌ಗಳು ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಜೋರಾಗಿ ಮಾಡಿಸುತ್ತಿದ್ದಾರೆ. ಇದೀಗ ಇದಕ್ಕೆ ಕನ್ನಡದ ಈ ಕಿರುತೆರೆ ನಟಿ ಕೂಡ ಹೊರತಾಗಿಲ್ಲ. ʼನನ್ನರಸಿ ರಾಧೆʼ ಧಾರಾವಾಹಿ ಖ್ಯಾತಿಯ ನಟಿ ಕೌಸ್ತುಭಾ ತನ್ನ ಭಾವಿ ಪತಿಗೆ ಮುತ್ತಿಡುವ ಮೂಲಕ ಅದ್ದೂರಿಯಾಗಿ ಫೋಟೋ ಶೂಟ್ ಮಾಡಿದ್ದಾರೆ.
ಇತ್ತೀಚೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಜೋರಾಗುತ್ತಿದೆ. ಸಿನಿಮಾ ರೇಂಜ್‌ನಲ್ಲಿ ಜನಸಾಮಾನ್ಯರು ಸಹ ಫೊಟೋಶೂಟ್ ಮಾಡಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಿಂದ ಸೆಲೆಬ್ರಿಟಿಗಳೂ ಸಹ ಹೊರತಾಗಿಲ್ಲ. ಮದುವೆಗೂ ಮೊದಲು ಫೋಟೋಶೂಟ್ ಮಾಡಿಸಿ ಖುಷಿ ಪಡುತ್ತಾರೆ. ಇದಕ್ಕೆ ಕಿರುತೆರೆ ನಟಿ ಕೌಸ್ತುಭಾ ಮಣಿ ಕೂಡ ಹೊರತಾಗಿಲ್ಲ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ, ‘ನನ್ನರಸಿ ರಾಧೆ’ ಧಾರಾವಾಹಿ ಖ್ಯಾತಿಯ ನಟಿ ಕೌಸ್ತುಭಾ ಅವರು ಹಸೆಮಣೆ ಏರಲು ರೆಡಿಯಾಗಿದ್ದು, ವಿವಾಹ ಪೂರ್ವ ಫೋಟೋಶೂಟ್ ಮಾಡಿದ್ದಾರೆ.
ನನ್ನರಸಿ ರಾಧೆ ಸೀರಿಯಲ್‌ನಲ್ಲಿ ಇಂಚರಾ ಹೆಸರಿನ ಪಾತ್ರ ಮಾಡಿ ಫೇಮಸ್ ಆಗಿದ್ದ ಕೌಸ್ತುಭಾ ಜನಮನ ಈ ಪಾತ್ರದ ಮೂಲಕ ಅವರು ಎಲ್ಲರಿಗೂ ಇಷ್ಟ ಆಗಿದ್ದರು.
ಸಧ್ಯ ಕೌಸ್ತುಭಾ ಅವರು ಸಿದ್ಧಾಂತ್ ಸತೀಶ್ ಅವರ ಕೈ ಹಿಡಿಯಲಿದ್ದು, ವಿವಾಹ ಪೂರ್ವ ಕಾರ್ಯಗಳು ನೆರವೇರಿವೆ. ಇದರ ಜೊತೆಗೆ ಅವರ ಪ್ರೀ-ವೆಡ್ಡಿಂಗ್ ಫೋಟೋ ಕೂಡ ಗಮನ ಸೆಳೆದಿದೆ.
Share this content:
Post Comment