ಆ ಸಿನಿಮಾದಲ್ಲಿ ಒಂದು ಸಿಗರೇಟ್ ಸೇದಿ ಜೀವನದಲ್ಲಿ ಧೂಮಪಾನಕ್ಕೆ ಸಂಪೂರ್ಣ ಅಡಿಕ್ಟ್ ಆಗಿದ್ರು ಈ ಖ್ಯಾತ ನಟಿ..!
Vidya Balan: ಪಾತ್ರಕ್ಕಾಗಿ ಎನನ್ನಾದರೂ ಮಾಡುವ ಕಲಾವಿದರು ಕೊನೆಗೆ ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ಅದೇ ರೀತಿ ಬಾಲಿವುಡ್ ನಟಯೊಬ್ಬರು ಸಿನಿಮಾವೊಂದಲ್ಲಿ ಸಿಗರೇಟ್ ಸೇದಿ ಚಟ ಹತ್ತಿಸಿಕೊಂಡುಬಿಟ್ಟಿದ್ದರು. ಯಾರು ಆ ನಟಿ.? ಬನ್ನಿ ತಿಳಿಯೋಣ…
ಹೌದು.. ನಟಿ ವಿದ್ಯಾ ಬಾಲನ್ ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು. ವಿದ್ಯಾ ಸಿಲ್ಕ್ ಸ್ಮಿತಾ ಅವರ ಬಯೋ ಪಿಕ್ ದಿ ಡರ್ಟಿ ಪಿಕ್ಚರ್ ನಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕೇವಲ 30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಪೀಸ್ ನಲ್ಲಿ 100 ಕೋಟಿ ರೂಪಾಯಿಗಳನ್ನು ಗಳಿಸಿತು.
ದಿ ಡರ್ಟಿ ಪಿಕ್ಚರ್ ನಲ್ಲಿ ವಿದ್ಯಾ ಸಿಗರೇಟ್ ಸೇದಬೇಕಾಗಿತ್ತು. ಈ ಚಿತ್ರದ ಸಾಕಷ್ಟು ದೃಶ್ಯಗಳಲ್ಲಿ ವಿದ್ಯಾ ಕೈಯಲ್ಲಿ ಸಿಗರೇಟ್ ಹಿಡಿದಿದ್ದರು. ಕಡೆಗೆ ಸಿನಿಮಾ ಮುಗಿದ ನಂತರವೂ ಸಹ ಸಿಗರೇಟ್ ಬಿಡದಷ್ಟು ನಟಿ ಧೂಮಪಾನಕ್ಕೆ ದಾಸರಾದರು. ಸ್ವತಃ ಸಂದರ್ಶನದಲ್ಲಿ ಒಂದರಲ್ಲಿ ವಿದ್ಯಾ ಪ್ರತಿದಿನ ತಾವು 2-3 ಸಿಗರೇಟ್ ಸೇರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಪಾತ್ರಕ್ಕಾಗಿ ಧೂಮಪಾನವನ್ನು ನಕಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಧೂಮಪಾನ ಮಾಡುವುದು ಶುರು ಮಾಡಿದೆ ಎಂದು ತಿಳಿಸಿದ್ದಾರೆ.
Share this content:
Post Comment