Loading Now

ಹೆಣ್ಣು ಮಗುವಾದ್ರೆ ಮಾತ್ರ ಹೆಂಡತಿ ಮುಖ ನೋಡುವುದಾಗಿ ಹೇಳಿದ್ದರು ಹಿರಿಯ ನಟ ಶ್ರೀನಾಥ್‌..! ಕಾರಣ ಏನು ಗೊತ್ತೆ..?

ಹೆಣ್ಣು ಮಗುವಾದ್ರೆ ಮಾತ್ರ ಹೆಂಡತಿ ಮುಖ ನೋಡುವುದಾಗಿ ಹೇಳಿದ್ದರು ಹಿರಿಯ ನಟ ಶ್ರೀನಾಥ್‌..! ಕಾರಣ ಏನು ಗೊತ್ತೆ..?

Actor Srinath wife and son : ಚಂದನವನದ ಹಿರಿಯ ನಟ ಶ್ರೀನಾಥ್‌ 90ರ ದಶಕದಲ್ಲಿ ಸ್ಟಾರ್‌ ನಟರಾಗಿ ಗುರುತಿಸಿಕೊಂಡಿದ್ದರು. ಇವರ ನಟನೆಯ ಅದೇಷ್ಟೋ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿವೆ. ಪ್ರಣಯರಾಜ ಎಂದೇ ಕರೆಯಿಸಿಕೊಳ್ಳುತ್ತಿದ್ದ ನಟನಿಗೆ ಇಂದಿಗೂ ಸಾಷ್ಟು ಜನ ಪ್ಯಾನ್ಸ್‌ಗಳಿದ್ದಾರೆ.

ಹೌದು.. ಕನ್ನಡ ಸಿನಿ ರಸಿಕರಿಗೆ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿರುವ ನಟ ಶ್ರೀನಾಥ್‌ ಅವರ ಪತ್ನಿ ಹೆಸರು ಗೀತಾ. ಈ ದಂಪತಿಗೆ ಒರ್ವ ಮಗನಿದ್ದಾನೆ. ತಮಾಷೆ ಅಂದ್ರೆ, ಶ್ರೀನಾಥ್‌ ಅವರಿಗೆ ಹೆಣ್ಣು ಮಕ್ಕಳೆಂದರೇ ತುಂಬಾ ಪ್ರೀತಿಯಂತೆ.. ಹಾಗಾಗಿ, ಅವರು, ತಮ್ಮ ಪತ್ನಿ ಹೆರಿಗೆಗೆ ಹೋಗುವಾಗ ಗಂಡು ಮಗು ಜನಿಸಿದರೇ ನಾನು ನಿನ್ನ ನೋಡೋಕೆ ಬರಲ್ಲ, ಹೆಣ್ಣು ಮಗು ಹುಟ್ಟಿದರಷ್ಟೇ ಬರ್ತೀನಿ ಅಂತ ತಮಾಷೆ ಮಾಡಿದ್ದರಂತೆ..

ಆದರೆ, ಅವರಿಗೆ ಕೊನೆಗೆ ಗಂಡು ಮಗು ಜನಿಸಿತ್ತು. ಆಗ ಅವರ ಪತ್ನಿ ಗೀತಾ ಅವರು ನನ್ನನ್ನು ಕ್ಷಮಿಸಿ ನಿಮಗೆ ಹೆಣ್ಣು ಮಗು ನೀಡಲು ನನ್ನಿಂದ ಆಗಲಿಲ್ಲ ಎನ್ನುತ್ತಾರೆ.. ಆಗ ಅವರು ಅಯ್ಯೋ ನಾನು ತಮಾಷೆಗಾಗಿ ಹೇಳಿದ್ದೆ ಅಂತ ಶ್ರೀನಾಥ್‌ ಅವರು ಹೇಳಿದ್ದರಂತೆ.

ಶ್ರೀನಾಥ್‌ ಅವರ ಮಗನ ರೋಹಿತ್‌ ಶ್ರೀನಾಥ್.‌ ಬೇಬಿ ರೋಹಿತ್‌ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಂಡ ಹೆಂಡತಿ, ಶಿಕಾರಿ, ಗರುಡ ರೇಖೆ, ಮಾಲ್ಗುಡಿ ಡೇಸ್‌ ಹೀಗೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಸಧ್ಯ ಅವರು, ಸಿನಿಮಾಗಳಿಗೆ ಬ್ರೇಕ್‌ ಹಾಕಿದ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ..

Share this content:

Post Comment

You May Have Missed