Loading Now

ಈ ಬಾರಿಯೂ ಮತದಾನ ಮಾಡದ ನಟಿ, ಮಾಜಿ ಸಂಸದೆ ರಮ್ಯಾ..! ಹೀಗ್ಯಾಕೆ ಮಾಡಿದ್ರು ಮೋಹಕ ತಾರೆ.?

ಈ ಬಾರಿಯೂ ಮತದಾನ ಮಾಡದ ನಟಿ, ಮಾಜಿ ಸಂಸದೆ ರಮ್ಯಾ..! ಹೀಗ್ಯಾಕೆ ಮಾಡಿದ್ರು ಮೋಹಕ ತಾರೆ.?

Actress Ramya : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಬಹುತೇಕ ನಟ ನಟಿಯರು ವೋಟ್‌ ಮಾಡುವ ಮೂಲಕ ಮತದಾನದ ಹಕ್ಕಿನ ಮಹತ್ವ ಸಾರಿದರು. ಆದರೆ ಮಾಜಿ ಸಂಸದೆ, ನಟಿ ರಮ್ಯಾ ಮಾತ್ರ ಮತದಾನದಿಂದ ದೂರ ಉಳಿದಿದ್ದಾರೆ. ಇದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಮತ್ತು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.

ಹೌದು.. ಸ್ಯಾಂಡಲ್‌ವುಡ್ ಮೋಹಕ ತಾರೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಕಳೆದ 6 ವರ್ಷಗಳಿಂದ ತಮ್ಮ ಮತದಾನದ ಹಕ್ಕನ್ನೇ ಚಲಾಯಿಸಿಲ್ಲ. ರಮ್ಯಾ ಮಂಡ್ಯದ ವಿದ್ಯಾನಗರದ ಮತಗಟ್ಟೆ ವ್ಯಾಪ್ತಿಯ ಮತದಾರರಾಗಿದ್ದು, 2018 ರಿಂದ ಯಾವುದೇ ಚುನಾವಣೆಗಳಲ್ಲಿ ಮತ ಹಾಕಿಲ್ಲ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಬೇಕಿದ್ದ ನಟಿ ಅಂತರ ಕಾಯ್ದುಕೊಂಡಿದ್ದರು. ಕಾರಣಾಂತದಿಂದ ಪ್ರಚಾರದಿಂದ ದೂರ ಉಳಿದರೂ ಸಹ ಮತದಾನ ಮಾಡಬೇಕಿತ್ತು. ಆದರೆ ಈ ಬಾರಿಯೂ ಸಹ ಮಾಜಿ ಸಂಸದೆ ರಮ್ಯಾ ಮತದಾನ ಮಾಡಿಲ್ಲ.

Share this content:

Post Comment

You May Have Missed