ತಮಿಳು ಭಾಷೆಯಲ್ಲಿ ಶಿವಣ್ಣ ಮತಯಾಚನೆ..! ʼಇದು ಕರ್ನಾಟಕʼ ಎಂದ ನೆಟ್ಟಿಗರು
Shivarajkumar : ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಬರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸಧ್ಯ ಶಿವಮೊಗ್ಗದಲ್ಲಿ ಪತ್ನಿ ಪರ ಪ್ರಚಾರ ಮಾಡುವಾಗ ಶಿವಣ್ಣ ತಮಿಳು ಭಾಷೆಯಲ್ಲಿ ಮಾತನಾಡಿದ್ದು, ಕೆಲ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು.. ನಟ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ತಮಿಳಿನಲ್ಲಿ ಮಾತನಾಡಿದ್ದಾರೆ. ಇದು ಕೆಲ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದೆ. ಇಲ್ಲಿ ತಮಿಳಿನವರು ಜಾಸ್ತಿ ಇದ್ದಾರೆ ಅಂತ ಗೊತ್ತಾಯ್ತು. ನಾನು ಚೆನ್ನೈನಲ್ಲಿ ಹುಟ್ಟಿದೆ, ಅಲ್ಲಿಯೇ ಬೆಳೆದಿದ್ದೇನೆ. ನನ್ನ ಎಜುಕೇಷನ್ ಸಹ ಅಲ್ಲಿಯೇ ಮುಗಿದಿದೆ. ನಮ್ಮ ಮನೆ ಅಲ್ಲಿಯೇ ಇತ್ತು ಅಂತ ಶಿವಣ್ಣ ಹೇಳಿದರು.
ಅಲ್ಲದೆ, ಎಲ್ಲರೂ ಕನ್ನಡ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ..? ಅಂತ ಅಲ್ಲಿದ್ದ ಜನರಿಗೆ ಶಿವಣ್ಣ ಪ್ರಶ್ನೆ ಮಾಡಿದರು. ಆಗ ಅಲ್ಲಿದ್ದ ಎಲ್ಲರೂ ಕನ್ನಡ ಮಾತನಾಡುತ್ತೇವೆ ಎಂದರು. ಆಗ ಶಿವಣ್ಣ, ನಾವು ಎಲ್ಲಿ ಇರುತ್ತೇವೋ ಅಲ್ಲಿನ ಭಾಷೆಗೆ ನಾವು ಗೌರವಿಸಬೇಕು. ಎಲ್ಲಿ ಹೋದರೂ ಅಲ್ಲಿಯ ಭಾಷೆ ಕಲಿಯಬೇಕು ಮತ್ತು ಗೌರವಿಸಬೇಕು ಎಂದು ಶಿವಣ್ಣ ಹೇಳಿದರು.
ಆದರೆ, ಶಿವರಾಜ್‌ಕುಮಾರ್ ಅವರು, ತಮಿಳು ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ. ಇದು ತಮಿಳುನಾಡು ಅಲ್ಲ ಕರ್ನಾಟಕ, ಇಲ್ಲಿ ಕನ್ನಡದಲ್ಲಿ ಮಾತಾಡಬೆಕು ಅಂತ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು, ಶಿವಣ್ಣನವರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
Share this content:
Post Comment