ನಟಿ ಮಾನ್ವಿತಾ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತೆ..? ಇವರೂ ಸಹ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಾರೆ..
Manvita Kamath : ನಟಿ ಮಾನ್ವಿತಾ ಕಾಮತ್ ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಾನ್ವಿತಾ ಕೈ ಹಿಡಿಯಲಿರುವ ಆ ಹುಡುಗ ಯಾರು..? ಅಂತ ಎಲ್ಲರು ತಲೆ ಕೆಡಿಸಿಕೊಂಡಿದ್ದರು. ಇದೀಗ ಮಾನ್ವಿತಾ ಭಾವಿ ಪತಿ ಫೋಟೋ ವೈರಲ್ ಆಗಿದೆ.
ಹೌದು.. ಮೇ 1 ರಂದು ನಟಿ ಮಾನ್ವಿತಾ ಕಾಮತ್ (Manvita Kamath husband) ಅವರು ಮ್ಯೂಸಿಕ್ ಡೈರೆಕ್ಟರ್ ಅರುಣ್ ಕುಮಾರ್ ಜೊತೆ ಮದುವೆಯಾಗಲಿದ್ದಾರೆ. ವಿವಾಹ ತಯಾರಿಯಲ್ಲಿರುವ ಮಾನ್ವಿತ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಈ ವೇಳೆ, ಮಾನ್ವಿತಾ ಕೈ ಹಿಡಿಯಲಿರುವ ಹುಡುಗ ಅರುಣ್ ಕುಮಾರ್ ಕೂಡ ಹಾಜರಿದ್ದರು.
ಅಶ್ವಿನಿ ಪುನೀತ್ ಅವರಿಗೆ ಮದುವೆ ಆಮಂತ್ರಣ ನೀಡಲು ಮಾನ್ವಿತಾ ತಮ್ಮ ಭಾವಿ ಪತಿಯೊಂದಿಗೆ ಬಂದಿದ್ದರು. ಈ ಕುರಿತು ಫೋಟೋ ವೈರಲ್ ಆಗುತ್ತಿದೆ. ಮಾನ್ವಿತಾ ಮದುವೆಯಾಗಲಿರುವ ವರನನ್ನು ನೋಡಿ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಜೋಡಿ ಸೂಪರ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮಾನ್ವಿತಾ ಮದುವೆ ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆಯಲಿದೆ. ಅರೇಂಜ್ ಮ್ಯಾರೇಜ್ ಆಗುತ್ತಿರುವ ನಟಿ, ಅಮ್ಮ ನೋಡಿದ ವರನನ್ನೇ ಮದುವೆಯಾಗುತ್ತಿದ್ದಾರೆ. ಈ ಮೂಲಕ ತಾಯಿಯ ಆಸೆ ಈಡೇರಿಸುತ್ತಿದ್ದಾರೆ.
Share this content:
Post Comment