Loading Now

ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದ ನಟ ರಣವೀರ್..! ದೂರು ದಾಖಲು

ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದ ನಟ ರಣವೀರ್..! ದೂರು ದಾಖಲು

Ranveer Singh deepfake video: ಇತ್ತೀಚೆಗೆ ಖ್ಯಾತ ನಟ ನಟಿಯರು ನೀಡುವ ರಾಜಕೀಯ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ ಲೋಕಸಭೆ ಚುನಾವಣೆಯ ಆರಂಭದಲ್ಲೆ ನಟ ರಣವೀರ್ ಸಿಂಗ್ ನೀಡಿರುವ ಹೇಳಿಕೆ ಒಂದು ಸಂಚಲನ ಮೂಡಿಸುತ್ತಿದೆ.

ಹೌದು… ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾದ ಡೀಪ್ ಫೇಕ್ ವೀಡಿಯೋ ಒಂದು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಕುರಿತು ನಟ ದೂರು ದಾಖಲಿಸಿದ್ದಾರೆ.

ವಾರಾಣಸಿಗೆ ತೆರಳಿದ್ದಾಗ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದ ವೀಡಿಯೋಗೆ, ದುಷ್ಕರ್ಮಿ ಗಳು ಎ.ಐ. ಮೂಲಕ ಫೇಕ್‌ ಆಡಿಯೋ ಸೇರಿಸಿದ್ದಾರೆ ಎಂದು ನಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ವೈರಲ್‌ ಆದ ವೀಡಿಯೋದಲ್ಲಿ ಸಿಂಗ್‌ ಅವರು, ಆಡಳಿತಾರೂಢ ಕೇಂದ್ರ ಬಿಜೆಪಿ ಸರಕಾರವನ್ನು ಟೀಕಿಸಿ, ಕಾಂಗ್ರೆಸ್‌ಗೆ ಮತನೀಡಿ ಎಂದು ಮನವಿ ಮಾಡಿರುವಂತೆ ಬಿಂಬಿಸಲಾಗಿದೆ. ಸಧ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

Share this content:

Post Comment

You May Have Missed