Loading Now

ನಿರ್ಮಾಪಕ ಮತ್ತು ಜಟ್ ಲ್ಯಾಗ್ ಪಬ್ ಮಾಲೀಕ ಸೌಂದರ್ಯ ಜಗದೀಶ್ ಆತ್ಮಹತ್ಯೆ..!

ನಿರ್ಮಾಪಕ ಮತ್ತು ಜಟ್ ಲ್ಯಾಗ್ ಪಬ್ ಮಾಲೀಕ ಸೌಂದರ್ಯ ಜಗದೀಶ್ ಆತ್ಮಹತ್ಯೆ..!

Soundarya Jagadish Death : ಸ್ಯಾಂಡಲ್‌ವುಡ್ ನಿರ್ಮಾಪಕ ಮತ್ತು ಜಟ್ ಲ್ಯಾಗ್ ಪಬ್ ಮಾಲೀಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯಲ್ಲಿಯೇ ನೆಣಿನ ಕುಣಿಯಲ್ಲೆ ನೇತಾಡುತ್ತಿದ್ದ ಜಗದೀಶರನ್ನ ಖಾಸಗಿ ಆಸ್ಪತ್ರೆ ಗೆ ಚಿಕಿತ್ಸೆ ಗೆ ರವಾನಿಸಲಾಗಿತ್ತು. ‌ಆದ್ರೆ ಮಾರ್ಗ ಮಧ್ಯದಲ್ಲೇ ಜಗದೀಶ್ ಉಸಿರು ಚೆಲ್ಲಿದ್ದಾರೆ.

ಮಹಾಲಕ್ಷ್ಮಿಲೇಔಟ್ ಕ್ಲಬ್ ರಸ್ತೆಯಲ್ಲಿರೋ ತಮ್ಮ ನಿವಾಸದಲ್ಲಿ ಸೌಂದರ್ಯ ಜಗದೀಶ್ (Soundarya Jagadish suicide) ಸೂಸೈಡ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ಸೌಂದರ್ಯ ಜಗದೀಶ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ರು ಎಂದು ತಿಳಿದುಬಂದಿದೆ. ʼಅಪ್ಪು ಪಪ್ಪುʼ ಸಿನಿಮಾದ ಮೂಲಕ ತಮ್ಮ ಮಗನನ್ನು ಸ್ಯಾಂಡಲ್‌ವುಡ್‌ಗೆ ಸೌಂದರ್ಯ ಜಗದೀಶ್ ಪರಿಚಯಿಸಿದ್ದರು.

ಜಗದೀಶ್‌ ರಾಮ್ ಲೀಲಾ, ಸ್ನೇಹಿತರು ಹೀಗೆ ಹಲವಾರು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದರು. ಇನ್ನೂ ಕಳೆದ ತಿಂಗಳು ಜಗದೀಶ್ ಬಾಡಿಗಾರ್ಡ್ ಸಾವನ್ನಿಪ್ಪಿದ್ರೆ. ಎರಡು ವಾರದ ಹಿಂದಷ್ಟೇ ಜಗದೀಶ್ ಅತ್ತೆ ಸಾವನ್ನಪ್ಪಿದ್ರು. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed