Loading Now

ಚಿರು ಪುತ್ರನಿಗೆ ಗೌರವ ಡಾಕ್ಟರೇಟ್‌ : ಚರಣ್‌ ಇನ್ಮುಂದೆ ಡಾ. ರಾಮ್‌ ಚರಣ್‌ ತೇಜ

ಚಿರು ಪುತ್ರನಿಗೆ ಗೌರವ ಡಾಕ್ಟರೇಟ್‌ : ಚರಣ್‌ ಇನ್ಮುಂದೆ ಡಾ. ರಾಮ್‌ ಚರಣ್‌ ತೇಜ

Ram Charan Honorary Doctorate : RRR ಚಿತ್ರದ ಮೂಲಕ ಮೆಗಾ ಪವರ್ ಸ್ಟಾರ್ ನಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದ ರಾಮ್ ಚರಣ್‌ ಸಾಧನೆಗೆ ಮತ್ತೊಂದು ಅಪರೂಪದ ಗೌರವ ಸಿಕ್ಕಿದೆ. ಚಿರು ಪುತ್ರನಿಗೆ ತಮಿಳುನಾಡಿನ ವೇಲ್ಸ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಹೌದು.. ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈನಲ್ಲಿರುವ ಪ್ರತಿಷ್ಠಿತ ವೇಲ್ಸ್ ವಿಶ್ವವಿದ್ಯಾಲಯ ರಾಮ್‌ ಚರಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ವೇಲ್ಸ್ ವಿಶ್ವವಿದ್ಯಾನಿಲಯ ವಿವಿಧ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ.

ಈ ವರ್ಷ ಮನರಂಜನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಮ್ ಚರಣ್ ಅವರಿಗೆ ವೇಲ್ಸ್ ವಿಶ್ವವಿದ್ಯಾಲಯದ 14ನೇ ವಾರ್ಷಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು. ಡಾಕ್ಟರೇಟ್ ಸ್ವೀಕರಿಸಿದ ನಂತರ ಮಾತನಾಡಿದ ರಾಮ್ ಚರಣ್, ನನಗೆ ತುಂಬಾ ಪ್ರೀತಿ ಹಾಗೂ ಗೌರವವನ್ನು ತೋರಿಸಿದ್ದಕ್ಕಾಗಿ ನಾನು ವೇಲ್ಸ್ ವಿಶ್ವವಿದ್ಯಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ.

ಅಲ್ಲದೆ, ನನಗೆ ಸಿಕ್ಕಿರುವ ಈ ಗೌರವ ನನ್ನ ಅಭಿಮಾನಿಗಳು, ನಿರ್ದೇಶಕರು, ನಿರ್ಮಾಪಕರು ಮತ್ತು ನನ್ನ ಸಹ ನಟರಿಗೆ ಸೇರಿದ್ದು. ವೇಲ್ಸ್ ವಿಶ್ವವಿದ್ಯಾನಿಲಯ ಇದನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಂದಿದ್ದಾರೆ. ಇನ್ನು ಕೆಲಸದ ಮುಂಭಾಗವಾಗಿ, ರಾಮ ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed