Loading Now

ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್ ಪರ ಸೋನು ಸೂದ್ ಧ್ವನಿ..! ನಟನ ವಿರುದ್ಧ ಆಕ್ರೋಶ

ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್ ಪರ ಸೋನು ಸೂದ್ ಧ್ವನಿ..! ನಟನ ವಿರುದ್ಧ ಆಕ್ರೋಶ

Sonu Sood: ಸೋಷಿಯಲ್‌ ಮೀಡಿಯಾದಲ್ಲಿ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ನೆಟ್ಟಿಗರು ಅ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಆದ್ರೆ ಇದೀಗ ಡೆಲಿವರಿ ಬಾಯ್‌ ಪರ ನಟ ಸೋನು ಸೂದ್‌ ಧ್ವನಿ ಎತ್ತಿದ್ದು, ಕೆಲ ನೆಟಿಜನ್ಸ್‌ಗೆ ಇಷ್ಟವಾಗಿಲ್ಲ.

ಹೌದು.. ಮನೆಗೆ ಫುಡ್‌ ಡೆಲಿವರಿ ಮಾಡಲು ಬರುವ ಸ್ವಿಗ್ಗಿ ಡೆಲಿವರಿ ಬಾಯ್‌ ಶೂ ಕದ್ದು ಪರಾರಿಯಾದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು. ವಿಡಿಯೋ ನೋಡಿದ ನೆಟ್ಟಿಗರು ಆ ವ್ಯಕ್ತಿಯ ಕೆಲಸಕ್ಕೆ ಕಿಡಿಕಾರಿದ್ದರು.

ಇದೀಗ ನಟ ಸೋನು ಸೂದ್ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಶೂ ಕದ್ದ ಡೆಲಿವರಿ ಬಾಯ್ ಪರ ಧ್ವನಿ ಎತ್ತಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಆ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮಕೈಗೊಳ್ಳಬೇಡಿ ಅಂತ ಮನವಿ ಮಾಡಿದ್ದಾರೆ.

ಅಲ್ಲದೆ, ಆ ವ್ಯಕ್ತಿಯನ್ನು ಶಿಕ್ಷಿಸುವ ಬದಲು ಆತನಿಗೆ ಹೊಸ ಜೋಡಿ ಶೂಗಳನ್ನು ಕೊಡಿಸಿ ಅಂತ ಸೋನು ಕೇಳಿಕೊಂಡಿದ್ದಾರೆ. ಆದರೆ ಕಳ್ಳತನ ಮಾಡಿದ ವ್ಯಕ್ತಿಗೆ ಸಪೋರ್ಟ್‌ ಮಾಡಿದ ಸೋನು ನಡೆ ನೆಟ್ಟಿಗರು ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಇದು ಸರಿಯಾದ ವಿಧಾನ ಅಲ್ಲ ಅಂತ ಕಾಮೆಂಟ್‌ ಮೂಲಕ ಕಿಡಿಕಾರಿದ್ದಾರೆ.

ರೋಹಿತ್ ಅರೋರಾ ಎಂಬ ವ್ಯಕ್ತಿ ತಮ್ಮ ಎಕ್ಸ್​​​​ ಖಾತೆಯಲ್ಲಿ ಡಿಲಿವರಿ ಬಾಯ್​​​​ ಶೂ ಕದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಹೇರಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋನು, ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ. ಆತನಿಗೆ ಒಂದು ಜೋಡಿ ಶೂವನ್ನು ನೀಡಿ. ಸ್ವಿಗ್ಗಿ ಡೆಲಿವರಿ ಹುಡುಗ ಬಡವನಾಗಿದ್ದರಿಂದ ಈ ಕೆಲಸ ಮಾಡಿದ್ದಾನೆ ಎಂದು ನಟ ಸೋನು ಸೂದ್‌ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed