DBoss ‘ಕಾಟೇರ’ನಿಗೆ 100ರ ಸಂಭ್ರಮ..! ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡಿದ ಟೀಮ್
Darshan Kaatera : ಕಳೆದ ಕೆಲವು ದಿನಗಳ ಹಿಂದೆ ʼಕಾಟೇರʼ ತಂಡ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ 50 ದಿನದ ಸಂಭ್ರಮವನ್ನ ಆಚರಿಸಿತ್ತು. ಚಿತ್ರಕ್ಕಾಗಿ ಕೆಲಸ ಮಾಡಿದವರಿಗೆ ಅಂದು ಗೌರವಿಸಲಾಗಿತ್ತು. ಇದೀಗ ಚಿತ್ರ ಯಶಸ್ವಿ 100 ದಿನವನ್ನ ಪೂರೈಸಿರುವ ಹಿನ್ನೆಲೆ ಕಾಟೇರ ಟೀಮ್ ಸೆಲೆಬ್ರೇಟ್ ಮಾಡಿದೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
29 ಡಿಸೆಂಬರ್ 2023 ರಂದು ಬಿಡುಗಡೆಯಾದ ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಗಳಿಸಿತ್ತು. ಈ ಚಿತ್ರದಲ್ಲಿ ದರ್ಶನ್ ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ, ದೇಶಿ ಕಥಾ ಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು.
ರೈತರ ಮೇಲಿನ ದಬ್ಬಾಳಿಕೆ, ಉಳುವವನೇ ಭೂಮಿಯ ಒಡೆಯ ಕಾಯ್ದೆ ಹೀಗೆ ಸಾಮಾಜಿಕ ನ್ಯಾಯ ನೀತಿಗಳನ್ನು ಹೊತ್ತು ತೆರೆ ಮೇಲೆ ಬಂದ ಕಾಟೇರ ಸಿನಿಮಾ ತನ್ನ ಮೊದಲ ಪ್ರದರ್ಶನದಿಂದಲೇ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಬರುವಂತೆ ಮಾಡಿತು. ಅಲ್ಲದೆ, ರೈತರು ಟ್ರ್ಯಾಕ್ಟರ್ ಮೂಲಕ ಬಂದು ಈ ಸಿನಿಮಾವನ್ನು ನೋಡಿ ಹೊಗಳಿದ್ದರು.
ಇನ್ನು 100 ದಿನದ ಸೆಲೆಬ್ರೇಷನ್ ಅನ್ನು ಚಿತ್ರತಂಡ ತುಂಬಾ ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿತು. ಡೈರೆಕ್ಟರ್ ತರುಣ್ ಸುಧೀರ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ತಂಡದ ಇತರ ಸದಸ್ಯರು ಈ ಸಂಭ್ರಮದಲ್ಲಿದ್ದರು. ಕೇಕ್ ಕಟ್ ಮಾಡಿ ತಂಡ ಸಂಭ್ರಮಿಸಿತು. ಸಧ್ಯ ನಟ ದರ್ಶನ್ ಎಡಗೈ ಸರ್ಜರಿಗೆ ಒಳಗಾಗಿದ್ದು, ರೆಸ್ಟ್ ಪಡೆಯುತ್ತಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment