Loading Now

ಖ್ಯಾತ ನಟ ಅರುಳ್‌ ಮಣಿ ಹೃದಯಾಘಾತದಿಂದ ನಿಧನ..!

ಖ್ಯಾತ ನಟ ಅರುಳ್‌ ಮಣಿ ಹೃದಯಾಘಾತದಿಂದ ನಿಧನ..!

Actor Arulmani death : ಜನಪ್ರಿಯ ತಮಿಳು ನಟ ಮತ್ತು ರಾಜಕಾರಣಿ ಅರುಳ್‌ಮಣಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 65 ವರ್ಷದ ನಟ ಗುರುವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಅಂತ ತಿಳಿದು ಬಂದಿದೆ. ಗುರುವಾರ ಬಿಸಿಲಿನ ತೀವ್ರ ತಾಪಕ್ಕೆ ಒಳಗಾಗಿ ನಟ ಅಸ್ವಸ್ಥಗೊಂಡಿದ್ದರು.

ಕಳೆದ ಹತ್ತು ದಿನಗಳಿಂದ ಅರುಳ್‌ಮಣಿಯವರು (Actor Arulmani) ಎಐಎಡಿಎಂಕೆ ಪರವಾಗಿ ಪ್ರಚಾರ ನಡೆಸುತ್ತಿದ್ದರು. ಗುರುವಾರ ಪ್ರಚಾರದ ವೇಳೆ ಬಿಸಿಲಿನ ತೀವ್ರ ತಾಪಕ್ಕೆ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಸಿಂಗಂ 2, ಲಿಂಗಾ, ತೆಂಡ್ರಾಲ್ ಸೇರಿದಂತೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅರುಳ್‌ಮಣಿ ನಟಿಸಿ ಜನಮನ್ನಣೆ ಗಳಿಸಿದ್ದಾರೆ. ನಟನಾಗಿ ಮುಂದುವರೆಯುತ್ತಲೇ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಎಐಎಡಿಎಂಕೆಯ ಕಟ್ಟಾ ಅಭಿಮಾನಿಯಾಗಿದ್ದ ಅರುಳ್‌ ಪ್ರತಿ ಚುನಾವಣೆ ವೇಳೆ ಆ ಪಕ್ಷದ ಪರ ಪ್ರಚಾರ ಮಾಡುತ್ತಿದ್ದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದರು. ಗುರುವಾರ ಪ್ರಚಾರ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದರು. ಕೂಡಲೇ ಅವರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed