ʼವೀರ ಕನ್ನಡಿಗʼ ನಟ ಸಯಾಜಿ ಶಿಂಧೆಗೆ ಹೃದಯಾಘಾತ..! ಶಸ್ತ್ರ ಚಿಕಿತ್ಸೆ, ಹೆಚ್ಚಿತು ಆತಂಕ
Sayaji Shinde hospitalized : ಬಹುಭಾಷಾ ನಟ ಸಯಾಜಿ ಶಿಂಧೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಅವರ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಕುಟುಂಬಸ್ಥರು ಅವರನ್ನು ದಾಖಲಿಸಿದ್ದಾರೆ.
ಹೌದು.. ನಟ ಸಯಾಜಿ ಶಿಂಧೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಗುರುವಾರ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಂಧೆ ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳಲ್ಲಿ ಬ್ಲಾಕ್ ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಧ್ಯ ನಟ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಾಯಾಜಿ ಶಿಂಧೆ ಹಿನ್ನೆಲೆ : ಶಿಂಧೆ ಮರಾಠಿ ರಂಗನಟರಾಗಿ ಸಿನಿ ಲೋಕಕ್ಕೆ ಕಾಲಿಟ್ಟರು. ಮರಾಠಿ ರಂಗನಟರಾಗಿದ್ದ ಅವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹಿಂದಿ ಚಿತ್ರಗಳಲ್ಲಿ. 1990 ರಲ್ಲಿ ‘ದಿಶಾ’ ಚಿತ್ರದ ಮೂಲಕ ನಟರಾಗಿ ಸಿನಿಲೋಕಕ್ಕೆ ಕಾಲಿಟ್ಟರು. ಕನ್ನಡ, ತೆಲುಗು, ಮರಾಠಿ, ಭೋಜಪುರಿ, ಮಲಯಾಳಂ, ಇಂಗ್ಲಿಷ್, ಗುಜರಾತಿ, ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ.
1991 ರಲ್ಲಿ ಪತಿತ ಪಾವನಿ ಎಂಬ ಸಿನಿಮಾ ಮೂಲಕ ಕನ್ನಡ ಸಿನಿಲೋಕಕ್ಕೆ ಕಾಲಿಟ್ಟರು. ವೀರ ಕನ್ನಡಿಗ ಪುನೀತ್ ರಾಜ್‌ಕುಮಾರ್ ಅವರ ಜತೆ ವಿಲನ್ ಪಾತ್ರದಲ್ಲಿ ಶಿಂಧೆ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಫೇಮಸ್ ಆದರು. 13ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಶಿಂಧೆ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment