Loading Now

ಪುಷ್ಪಾ 2 ರಲ್ಲಿ ಅಲ್ಲು ಅರ್ಜುನ್‌ ತೊಟ್ಟ ಸೀರೆ ಯಾರದ್ದು ಗೊತ್ತೆ..? ಸೀರೆ ಹಿಂದಿದೆ ಬನ್ನಿ ಭಾವನಾತ್ಮಕ ಕಥೆ

ಪುಷ್ಪಾ 2 ರಲ್ಲಿ ಅಲ್ಲು ಅರ್ಜುನ್‌ ತೊಟ್ಟ ಸೀರೆ ಯಾರದ್ದು ಗೊತ್ತೆ..? ಸೀರೆ ಹಿಂದಿದೆ ಬನ್ನಿ ಭಾವನಾತ್ಮಕ ಕಥೆ

Pushpa 2 The Rule Teaser : ಸ್ಟಾರ್‌ ಡೈರೆಕ್ಟರ್‌ ಸುಕುಮಾರ್‌ ನಿರ್ದೇಶನದ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯದ ಪುಷ್ಪಾ 2 ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಕುತೂಹಲ ಕೆರಳಿಸುತ್ತಿದೆ. ಟೀಸರ್‌ನಲ್ಲಿ ಅರ್ಜುನ್‌ ಸೀರೆಯುಟ್ಟು ಮಾತೆ ಕಾಳಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ದೃಶ್ಯದಲ್ಲಿ ಬನ್ನಿ ತೊಟ್ಟ ಸೀರೆಯ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.

ಹೌದು.. ಭಾರತೀಯ ಸಿನಿರಂಗದಲ್ಲಿ ಸಧ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಪುಷ್ಪ 2. ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾ ಮೊದಲ ಬಾಗ ಸೂಪರ್‌ ಹಿಟ್‌ ಆದನಂತರ ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ 2 (Pushpa 2 Allu Arjun) ಮೂಲಕ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಸಧ್ಯ ಪುಷ್ಪಾ 2 ಟೀಸರ್ ಸಖತ್‌ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಗಂಗಮ್ಮ ಜಾತ್ರೆಯಲ್ಲಿ ಅಲ್ಲು ಅರ್ಜುನ್ ತೊಟ್ಟ ಸೀರೆಯ ಹಿಂದೆ ಭಾವನಾತ್ಮಕ ನಂಟಿದೆ ಅಂತ ಹೇಳಲಾಗುತ್ತಿದೆ. ​ ಕಟ್ಟಿದ ಸೀರೆಯಲ್ಲಿ ವಿಶೇಷತೆ ಇದೆ ಎನ್ನಲಾಗುತ್ತದೆ.. ಇದು ತಾಯಿಯ ಸೆಂಟಿಮೆಂಟ್ ಗೆ ಸಂಬಂಧಿಸಿದ್ದು. ಈ ದೃಶ್ಯದಲ್ಲಿ ಐಕಾನ್ ಸ್ಟಾರ್ ಧರಿಸಿರುವ ಸೀರೆ ನಿಜವಾಗಿ ಬನ್ನಿ ತಾಯಿಯದ್ದಾಗಿದೆ. ಇದು ಸೆಂಟಿಮೆಂಟ್ ಆಗಿರುತ್ತದೆ ಎಂದುಕೊಂಡು ನಿರ್ದೇಶಕ ಸುಕುಮಾರ್ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರಂತೆ. ಈ ಹೊಡೆದಾಟದ ದೃಶ್ಯ ಸಿನಿಮಾದಲ್ಲಿ ಹೇಗೆ ಇರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಈ ವರ್ಷ ಆಗಸ್ಟ್ 15 ರಂದು ಪುಷ್ಪ 2 (Allu Arjun) ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿದ್ದರೆ. ರಾವ್ ರಮೇಶ್, ಫಹಾದ್ ಫಾಜಿಲ್, ಅನಸೂಯಾ, ಸುನೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೇವಿಶ್ರೀ ಸಂಗೀತ ನಿರ್ದೇಶನವಿದೆ.

Share this content:

Post Comment

You May Have Missed