Loading Now

ಅಲ್ಲು ಅರ್ಜುನ್ ತಾತ ಯಾರು ಗೊತ್ತೆ.! ಇವರು ಸೂಪರ್ ಸ್ಟಾರ್ ನಟ

ಅಲ್ಲು ಅರ್ಜುನ್ ತಾತ ಯಾರು ಗೊತ್ತೆ.! ಇವರು ಸೂಪರ್ ಸ್ಟಾರ್ ನಟ

Allu arjun: ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಪ್ಯಾನ್ ಇಂಡಿಯಾ ಸ್ಟಾರ್ ಗೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ನಟ ನಟಿಯರು ವಿಶ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಅವರ ಅಭಿಮಾನಿಗಳು ಬನ್ನಿ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

1982 ಏಪ್ರಿಲ್ 8ರಂದು ಜನಿಸಿದ ಅಲ್ಲು ಅರ್ಜುನ್ ಟಾಲಿವುಡ್ ಹಿರಿಯ ಹಾಸ್ಯ ನಟ ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ. ಗೀತಾ ಆರ್ಟ್ಸ್ ಮುಖ್ಯಸ್ಥ ಅಲ್ಲು ಅರವಿಂದ್ ಅವರ ಪುತ್ರ. ಮೆಗಾಸ್ಟಾರ್ ಚಿರಂಜೀವಿ ಅಳಿಯನಾಗಿ ಬನ್ನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

‘ವಿಜೇತ’ ಮತ್ತು ‘ಸ್ವಾತಿಮುತ್ಯಂ’ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಬನ್ನಿ ‘ಗಂಗೋತ್ರಿ’ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮೊದಲ ಸಿನಿಮಾದಿಂದ ಬನ್ನಿ ಅಪಾರ ಅಭಿಮಾನಿಗಳನ್ನ ಗಳಿಸಿದರು.

ಇನ್ನು ಡೈರೆಕ್ಟರ್‌ ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಪುಷ್ಪ 2 ದಿ ರೂಲ್ʼ. ಇಂದು ಬನ್ನಿ ಹುಟ್ಟುಹಬ್ಬದ ಪ್ರಯುಕ್ತ ʼಪುಷ್ಪ 2 ದಿ ರೂಲ್‌ʼ ಚಿತ್ರದ ಟೀಸರ್ ಬಿಡುಗಡೆಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Share this content:

Post Comment

You May Have Missed