ಖಾಲಿ ಕೈಯಲ್ಲಿ ಸಿನಿರಂಗಕ್ಕೆ ಬಂದ ಈ ನಟ ಇದೀಗ 6300 ಕೋಟಿ ರೂ. ಒಡೆಯ..!
Shah Rukh Khan life story : ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕು ಅಂದ್ರೆ ಬೆಂಗಳೂರಿಗೆ ಬರಲೇಬೇಕು ಅಂದರಂತೆ ಬಾಲಿವುಡ್‌ನಲ್ಲಿ ಬೆಳಗಬೇಕು ಆಂದ್ರೆ ಮಂಬೈ ಟ್ರೈನ್ ಹತ್ತಲೇಬೇಕು.. ಅದರಂತೆ ಖಾಲಿ ಕೈಯಲ್ಲಿ ಬಂದು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡು ಸೂಪರ್ ಸ್ಟಾರ್ ಆಗಿ ಕೆಲ ನಟರು ಮಿಂಚುತ್ತಿದ್ದಾರೆ..
ಈ ಪೈಕಿ ಈ ಫೋಟೋದಲ್ಲಿ ಕಾಣುತ್ತಿರುವ ಈ ಮಗು ಕೂಡ ಹೌದು.. ನಟನಾಗಬೇಕು ಅಂತ ಮುಂಬೈಗೆ ಬಂದ ಈ ಮಗು, ಆ ನಂತರ ಕಠಿಣ ಪರಿಶ್ರಮದ ಮೇಲೆ ಇಂದು ಸಿನಿರಂಗದ ಶ್ರೀಮಂತ ನಟರಲ್ಲಿ ಒಬ್ಬರಾಗಿ ಇದೀಗ ಬಾಲಿವುಡ್ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ.
ಹೌದು.. ಈ ಫೊಟೋದಲ್ಲಿ ಇರುವ ಮಗು ಬೇರೆ ಯಾರೂ ಅಲ್ಲ, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್. ಕಿಂಗ್ ಖಾನ್ ಎಂದು ಕರೆಯಿಸಿಕೊಳ್ಳುವ ಶಾರುಖ್, 1965 ನವೆಂಬರ್ ನಲ್ಲಿ ದೆಹಲಿಯಲ್ಲಿ ಜನಿಸಿದರು. ಅವರ ತಂದೆ 1981 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರೆ, ತಾಯಿ 1991 ರಲ್ಲಿ ಮಧುಮೇಹದ ಕಾರಣದಿಂದ ಇಹಲೋಕ ತ್ಯಜಿಸಿದರು. ಇದರಿಂದಾಗಿ ಅವರು ಬಹಳ ಕಷ್ಟದ ದಿನಗಳನ್ನು ಅವರು ಎದುರಿಸಬೇಕಾಗಿತ್ತು.
1989 ರಲ್ಲಿ ‘ಫೌಜಿ’ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಶಾರುಖ್, 1992ರಲ್ಲಿ ತೆರೆಕಂಡ ‘ದೀವಾನಾ’ ಸಿನಿಮಾದ ಮೂಲಕ ಬಿಗ್‌ಸ್ಕ್ರೀನ್‌ಗೆ ಪ್ರವೇಶ ಮಾಡಿದರು. ಅಲ್ಲದೆ ಮೊದಲ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದರು. ಈ ಚಿತ್ರದ ನಂತರ, ಶಾರುಖ್ ಲಕ್ ಮತ್ತು ಲುಕ್ ಬದಲಾಯಿತು.
ಶಾರುಖ್ ಖಾನ್ ಮೊದಲು 50 ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ ಇದೀಗ ಅವರ ಒಟ್ಟು ಆಸ್ತಿ 6300 ಕೋಟಿ ರೂ. ಕಳೆದ ಕೆಲ ದಶಕದಲ್ಲಿ ಅವರ ನಿವ್ವಳ ಮೌಲ್ಯವು 300 ಪ್ರತಿಶತಕ್ಕಿಂತ ಹೆಚ್ಚಾಗಿದ್ದು, ಶಾರುಖ್ ಪ್ರಪಂಚದ ಶ್ರೀಮಂತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment