41ನೇ ವಯಸ್ಸಿನಲ್ಲಿ ಯಾರಿಗೂ ತಿಳಿಯದಂತೆ ಗಂಡು ಮಗುವಿಗೆ ಜನ್ಮ ನೀಡಿದ ಕನ್ನಡದ ಖ್ಯಾತ ನಟಿ..!
Actor Aarti Chabria : ʼಅಹಂ ಪ್ರೇಮಾಸ್ಮಿʼ ಸಿನಿಮಾ ಖ್ಯಾತಿಯ ನಟಿ ಆರತಿ ಛಾಬ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ತಮ್ಮ ಅಭಿಮಾನಿಗಳೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ. ಆದರೆ, ನಟಿ 9 ತಿಂಗಳ ಕಾಲ ತನ್ನ ಗರ್ಭಾವಸ್ಥೆಯ ಸುದ್ದಿಯನ್ನು ಮರೆಮಾಚಿದ್ದರು.
ನಟಿ ಆರತಿ ಛಾಬ್ರಿಯಾ ಮಾರ್ಚ್ 4 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಯುವನ್ ಅಂತ ಹೆಸರಿಟ್ಟಿದ್ದಾರೆ. ಇತ್ತೀಚಿಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ತಾಯ್ತನದ ಅನುಭವವನ್ನು ಹಂಚಿಕೊಂಡಿದ್ದರು. ಈ ವೇಳೆ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.
41ನೇ ವಯಸ್ಸಿನಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ನನಗೆ ಈ ಹಿಂದೆ ಗರ್ಭಪಾತವಾಗಿತ್ತು. ಅದಕ್ಕಾಗಿಯೇ ನಾನು ನಾನು ನನ್ನ ತಾಯ್ತನದ ವಿಚಾರ ಮುಚ್ಚಿಟ್ಟೆ ಅಂತ ಮಗುವಿಗೆ ಜನ್ಮ ನೀಡುವವರೆಗೂ ಆರತಿ ತಾವು ಗರ್ಭಿಣಿಯಾಗಿದ್ದ ವಿಚಾರ ಗುಟ್ಟಾಗಿ ಏಕೆ ಇಟ್ಟಿದ್ದರು ಅಂತ ಸ್ಪಷ್ಟನೆ ನೀಡಿದರು.
ಇನ್ನು 2019 ರಲ್ಲಿ ಆರತಿ ವಿಶಾರದ್ ಬಿಡಸಿ ಎಂಬುವವರ ಜೊತೆ ವಿವಾಹವಾದರು, ಸಧ್ಯ ಕುಟುಂಬದ ಜೊತೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೋವಿಡ್ ಸಮಯದಲ್ಲಿ ಗರ್ಭಿಣಿಯಾಗಿದ್ದ ಆರತಿಗೆ ಗರ್ಭಪಾತವಾಗಿತ್ತು. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಇದೀಗ ಮಗು ಹುಟ್ಟಿದ್ದು, ತಮ್ಮ ಹಳೆಯ ನೋವುಗಳೆಲ್ಲವನ್ನು ಮರೆತಿರುವುದಾಗಿ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್ಡೆಟ್ಸ್ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment