ಜಾನ್ವಿ ಕಪೂರ್ ಮದುವೆ ಫಿಕ್ಸ್..! ಮಾಜಿ ಸಿಎಂ ಮೊಮ್ಮಗನ ಕೈ ಹಿಡಿಯಲಿದ್ದಾಳೆ ಶ್ರೀದೇವಿ ಪುತ್ರಿ
Janhvi Kapoor marriage : ಶೀಘ್ರದಲ್ಲೇ ಬಾಲಿವುಡ್ ನಟಿ ಜಾನ್ವಿ ಕಪೂರ್ ಮದುವೆಯಾಗಲಿದ್ದು, ಆದಷ್ಟು ಬೇಗ ದಿನಾಂಕ ನಿಗದಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಜಾನ್ವಿ ಲವ್ ಸೀಕ್ರೆಟ್ ಸಹ ಬಯಲಾಗಿದ್ದು, ಮಗಳ ಬಾಯ್ ಫ್ರೆಂಡ್ ಬಗ್ಗೆ ಸ್ವತಃ ಬೋನಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ಕಳೆದ ಕೆಲವು ವರ್ಷಗಳಿಂದ ನಟಿ ಜಾನ್ವಿ ಕಪೂರ್ ಮಾಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮೊಮ್ಮಗ ಶಿಖರ್ ಪಹಾಡಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಲೇ ಇದೆ. ಇದಕ್ಕೆ ಇದೀಗ ಫುಲ್ ಸ್ಟಾಪ್ ಸಿಕ್ಕಿದ್ದು, ಸ್ವತಃ ಜಾನ್ವಿ ತಂದೆ ನಿರ್ಮಾಪಕ ಬೋನಿ ಕಪೂರ್ ಈ ಕುರಿತು ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಬೋನಿ ಕಪೂರ್, ಶಿಖರ್ ಪಹಾಡಿಯಾ ಮತ್ತು ಜಾನ್ವಿ ಸಂಬಂಧದ ಕುರಿತ ಮಾತನಾಡುವಾಗ, ಶಿಖರ್ ತಂಬಾ ಒಳ್ಳೆಯ ವ್ಯಕ್ತಿ, ನನಗೂ ಆತ ಸ್ನೇಹಿತನಂತೆ, ಯಾವಾಗಲೂ ನಮ್ಮ ಸಹಾಯಕ್ಕೆ ಬರುತ್ತಾರೆ ಅಲ್ಲದೆ ಅವರು ಜಾನ್ವಿ ಎಕ್ಸ್ ಅಲ್ಲ ಅಂತ ಹೇಳುವ ಮೂಲಕ ಮಗಳ ಲವ್ ಸ್ಟೋರಿ ನಿಜ ಅಂತ ಕನ್ಫರ್ಮ್ ಮಾಡಿದ್ದಾರೆ. ಇದರಿಂದಾಗಿ ಶೀಘ್ರವೇ ಜೊಡಿ ಮದುವೆಯಾಗಲಿದೆ ಅಂತ ಹೇಳಲಾಗುತ್ತಿದೆ.
Share this content:
Post Comment