Loading Now

ಇತಿಹಾಸ ಸೃಷ್ಟಿಸಲು ರವಿಮಾಮನ ‘ಪ್ರೇಮಲೋಕ 2’ ರೆಡಿ..! ಹಿರೋಯಿನ್ ಯಾರು ಗೊತ್ತೆ.?

ಇತಿಹಾಸ ಸೃಷ್ಟಿಸಲು ರವಿಮಾಮನ ‘ಪ್ರೇಮಲೋಕ 2’ ರೆಡಿ..! ಹಿರೋಯಿನ್ ಯಾರು ಗೊತ್ತೆ.?

Premaloka 2 :ಸ್ಯಾಂಡಲ್ ವುಡ್ ನಲ್ಲಿ‘ಪ್ರೇಮಲೋಕ 2’ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಶೀಘ್ರವೇ ಈ ಸಿನಿಮಾ ಸೆಟ್ಟರಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತ ಇಂಟರೆಸ್ಟಿಂಗ್ ವರದಿ ಇಲ್ಲಿದೆ.

ಹೌದು… ಪ್ರೇಮಲೋಕ ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಟನೆ ಹಂಸಲೇಖ ಅವರ ಹಾಡುಗಳು ಕನ್ನಡ ಸಿನಿ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದವು.

ಇಂದಿಗೂ ಪ್ರೇಮ ಲೋಕ ಸಿನಿಮಾದ ಸಾಂಗ್ಸ್ ಜನಪ್ರಿಯ. ಸದ್ಯ ಮತ್ತೊಮ್ಮೆ ಇತಿಹಾಸ ಮರುಕಳಿಸಲಿದ್ದು “ಪ್ರೇಮಲೋಕ 2” ಸಿನಿಮಾ (Ravichandran Premaloka 2) ಶೀಘ್ರವೇ ಸೆಟ್ಟೆರಲಿದೆ ಎಂದು ತಿಳಿದು ಬಂದಿದೆ.

ರವಿಮಾಮ ಈ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರೇಮಲೋಕ-2’ ಸಿನಿಮಾ ಬಗ್ಗೆ ಅಲ್ಲಲ್ಲಿ ಹಿಂಟ್ ಕೂಡಾ ನೀಡುತ್ತಿದ್ದಾರೆ. ಇನ್ನೂ ಈ ಸಿನಿಮಾದ ನಾಯಕ ನಟ, ನಟಿ ಇತರೆ ಕಲಾವಿದರು, ತಂತ್ರಜ್ಞರ ಬಗ್ಗೆ ಅಪ್ ಡೇಟ್ ಹೊರಬರಬೇಕಿದೆ..

ಅಲ್ಲದೆ ಮೇ 30ರಂದು ರವಿಚಂದ್ರನ್‌ ಅವರ ಹುಟ್ಟುಹಬ್ಬ, ಅಂದಿನಿಂದಲೇ ‘ಪ್ರೇಮಲೋಕ-2’ ಸಿನಿಮಾದ ಚಿತ್ರೀಕರಣ ಆರಂಭಿಸಲು ಪ್ಲಾನ್‌ ಮಾಡಿದ್ದಾಗಿ ತಿಳಿದು ಬಂದಿದೆ…

Share this content:

Post Comment

You May Have Missed