Loading Now

Daniel Balaji : ʼಕಿರಾತಕʼ ಸಿನಿಮಾದ ವಿಲನ್‌ ಡೇನಿಯಲ್‌ ಹೃದಯಾಘಾತದಿಂದ ನಿಧನ..!

Daniel Balaji : ʼಕಿರಾತಕʼ ಸಿನಿಮಾದ ವಿಲನ್‌ ಡೇನಿಯಲ್‌ ಹೃದಯಾಘಾತದಿಂದ ನಿಧನ..!

Daniel Balaji death : ಸ್ಯಾಂಡಲ್‌ವುಡ್‌ ʼಕಿರಾತಕʼ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ನಟಿಸಿ ಆ ಮೂಲಕ ಕರುನಾಡಿನಲ್ಲಿ ಜನಪ್ರಿಯತೆ ಗಳಿಸಿದ್ದ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.

ನಟ ಡೇನಿಯಲ್ ಬಾಲಾಜಿ ಅವರಿಗೆ ಮಾರ್ಚ್ 29 ರಂದು ಎದೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ಚೆನ್ನೈನ ಕೋಟಿವಾಕಂನಲ್ಲಿರುವ ಖಾಸಗಿ (Tamil actor Daniel Balaji passed away) ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಡೇನಿಯಲ್ ಬಾಲಾಜಿ ಅವರು, ಕಳೆದ ವರ್ಷ 2021 ರಲ್ಲಿ ಕರೋನಾ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಏಕಾಏಕಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಧ್ಯ ಅವರ ಪಾರ್ಥಿವ ಶರೀರವನ್ನು ಶನಿವಾರ ಪುರಸೈವಾಲ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ತಿಳಿದು ಬಂದಿದೆ.

ನಟ ಡೇನಿಯಲ್‌ ಕನ್ನಡ, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ದಕ್ಷಿಣ (Tamil Actor Daniel Balaji Dies at 48 After Heart Attack) ಭಾರತದ ಎಲ್ಲಾ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 2001 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಸಿದ್ಧಿ, ಅಲೆಯಲ್ ಧಾರಾವಾಹಿಯಲ್ಲಿ ನಟಿಸಿದರು. ಕಾದಲ್ ಕೊಂಡೆನ್‌ ಸಿನಿಮಾದ ಮೂಲಕ ಡೇನಿಯಲ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ತಾಯಿಗಾಗಿ ದೇವಸ್ಥಾನ ನಿರ್ಮಿಸಿದ್ದ ಡೇನಿಯಲ್ ಬಾಲಾಜಿ : ಡೇನಿಯಲ್‌ ಅವರು ಚೆನ್ನೈ ಸಮೀಪದ ಆವಡಿ ಎಂಬಲ್ಲಿ ರಕ್ತಲ್ ಅಂಗಲಾ ಪರಮೇಶ್ವರಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕುಂಬಾಭಿಷೇಕವನ್ನು ಮಾಡಿದರು. ಡೇನಿಯಲ್ ಬಾಲಾಜಿ ತನ್ನ ತಾಯಿಯ ಆಸೆಗಾಗಿ ಈ ದೇವಾಲಯವನ್ನು ನಿರ್ಮಿಸಿದ್ದರು. ಸಂದರ್ಶನವೊಂದರಲ್ಲಿ ನಟ ಯಶ್ ಅವರು ದೇವಾಲಯ ನಿರ್ಮಿಸಲು ಹಣಕಾಸಿನ ನೆರವು ನೀಡಿದ್ದಾಗಿ ತಿಳಿಸಿದ್ದರು.

Share this content:

Post Comment

You May Have Missed