Loading Now

ಇಂದಿನಿಂದ ಗ್ರೇಟ್ ಇಂಡಿಯನ್ ಕಪಿಲ್ ಶೋ ಪ್ರಸಾರ..! ಈ ಓಟಿಟಿಯಲ್ಲಿ ಮಾತ್ರ ಲಭ್ಯ

ಇಂದಿನಿಂದ ಗ್ರೇಟ್ ಇಂಡಿಯನ್ ಕಪಿಲ್ ಶೋ ಪ್ರಸಾರ..! ಈ ಓಟಿಟಿಯಲ್ಲಿ ಮಾತ್ರ ಲಭ್ಯ

The Great Indian Kapil Show : ಗ್ರೇಟ್ ಇಂಡಿಯನ್ ಕಪಿಲ್ ಶೋ ಇಂದು ರಾತ್ರಿ 8 ಗಂಟೆಗೆ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಕಾರಣಾಂತರಗದಿಂದ ದೂರವಾಗಿದ್ದ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಜೋಡಿ ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಲು ಮತ್ತೆ ಕಮ್‌ಬ್ಯಾಕ್‌ ಮಾಡಿದ್ದಾರೆ..

ಕಪಿಲ್‌ ಮತ್ತು ಸುನೀಲ್‌ ಗ್ರೋವರ್‌ ಜೊತೆ ಕೃಷ್ಣ ಅಭಿಷೇಕ್, ಕಿಕು ಶಾರದಾ, ಅರ್ಚನಾ ಪುರಣ್ ಸಿಂಗ್ ಮತ್ತು ರಾಜೀವ್ ಸಿಂಗ್ ಇರಲಿದ್ದಾರೆ. ಇನ್ನು ಕಪಿಲ್ ಶರ್ಮಾ (Kapil Sharma) ಮತ್ತು ಸುನಿಲ್ ಗ್ರೋವರ್ (Sunil Grover) ಅವರ ಡೈನಾಮಿಕ್ ಕೆಮಿಸ್ಟ್ರಿ ಮತ್ತು ಹಾಸ್ಯವನ್ನು ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳು ಇಬ್ಬರನ್ನು ಈ ಶೋ ಮೂಲಕ ನೋಡಲು ರೆಡಿಯಾಗಿದ್ದಾರೆ.

ಗ್ರೇಟ್ ಇಂಡಿಯನ್ ಕಪಿಲ್ ಶೋ ಇಂದು ರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ. ಕಪಿಲ್ ಶರ್ಮಾ ನಡೆಸಿಕೊಡಲಿರುವ ಈ ಕಾರ್ಯಕ್ರದ ಮೊದಲ ಸಂಚಿಕೆಯ ಟ್ರೇಲರ್ ಮತ್ತು ಸ್ನೀಕ್-ಪೀಕ್ ಈಗಾಗಲೇ ಬಿಡುಗಡೆಯಾಗಿದ್ದು, ಶೋ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ.

Share this content:

Post Comment

You May Have Missed