ಗಂಡಿಗೆ ತಾಳಿ ಕಟ್ಟಿ ವಿಶಿಷ್ಟವಾಗಿ ಮದುವೆಯಾದ ತಮಿಳು ನಟಿ..! ವಿಡಿಯೋ ವೈರಲ್
Gouri Kishan and aditya bhaskar : ತಮಿಳು ಸೂಪರ್ ಹಿಟ್ ಸಿನಿಮಾ ’96’ ನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರಿಬ್ಬರ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದ ಗೌರಿ ಕಿಶನ್ ಮತ್ತು ಆದಿತ್ಯಗೂ ಕೂಡ ಒಳ್ಳೆಯ ಹೆಸರು ಬಂದಿದೆ. ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಕುರಿತ ಫೋಟೋ ವೈರಲ್ ಆಗಿದೆ..
ಹೌದು.. 96 ಸಿನಿಮಾದಲ್ಲಿ ತ್ರಿಷಾ ಬಾಲ್ಯದ ಪಾತ್ರದಲ್ಲಿ ಗೌರಿ ಕಿಶನ್ ಕಾಣಿಸಿಕೊಂಡಿದ್ದರು. ಆದಿತ್ಯ ವಿಜಯ್ ಸೇತುಪತಿ ಪಾತ್ರವನ್ನು ನಿರ್ವಹಿಸಿದ್ದರು. ಈ ಜೋಡಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ಸಧ್ಯ ಈ ಜೋಡಿ ಮದುವೆಯಾಗಿದ್ದಾಗಿ (Gouri Kishan marriage ) ತಿಳಿದು ಬಂದಿದ್ದು, ಈ ಕುರಿತ ಫೋಟೋ ವೈರಲ್ ಆಗಿದೆ.
ಮತ್ತೊಂದೆಡೆ ಗೌರಿಗೆ ಆದಿತ್ಯ ತಾಳಿ ಕಟ್ಟಬೇಕಿತ್ತು. ಆದರೆ ಗೌರಿಯೇ ನಟ ಆದಿತ್ಯಗೆ ತಾಳಿ ಕಟ್ಟುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಕುರಿತು ವಿಡಿಯೋ ಸಹ ವೈರಲ್ ಆಗಿದೆ. ಬಟ್ ಇಲ್ಲೊಂದು ಬಿಗ್ ಟ್ವೀಸ್ಟ್ ಇದೆ… ಅದೇನು ಅಂತ ತಿಳಿಯಲು ಮುಂದೆ ಓದಿ..
ವೈರಲ್ ಫೋಟೋ ‘ಹಾಟ್ ಸ್ಪಾಟ್’ ಎಂಬ ಚಿತ್ರಕ್ಕೆ ಸಂಬಂಧಿಸಿದ್ದಾಗಿ ತಿಳಿದು ಬಂದಿದೆ. ಈ ಸಿನಿಮಾದಲ್ಲಿ ಗೌರಿ ಆದಿತ್ಯ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 29 ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಚಿತ್ರದ ಪ್ರಚಾರ ಭಾಗವಾಗಿ ಚಿತ್ರತಂಡ ಈ ಫೋಟೋಗಳನ್ನು ಬಿಡುಗಡೆ ಮಾಡಿದೆ.
Share this content:
Post Comment