Yuva Movie Review : ಯವʼ ಸಿನಿಮಾಗೆ ಪ್ರೇಕ್ಷಕನ ಜೈಕಾರ..! ಕರುನಾಡಿನಲ್ಲಿ ಪವರ್ ಹೌಸ್ ಕುಡಿಯ ಅಬ್ಬರ ಶುರು
Yuva Movie Review : ಬಹುನಿರೀಕ್ಷಿತ ʼಯುವʼ ಸಿನಿಮಾ ತೆರೆಕಂಡಿದ್ದು, ಕರುನಾಡಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗೆ ಸಿಗುತ್ತಿದ್ದ ಕ್ರೇಜ್ ಯುವ ರಾಜ್‌ಕುಮಾರ್ ಸಿನಿಮಾಗೆ ಸಿಗುತ್ತಿದ್ದು, ಅಪ್ಪು ಇಸ್ ಕಮ್ ಬ್ಯಾಕ್ ಅಂತ ಅಂತ ಅವರ ಅಭಿಮಾನಿಗಳು ಘೊಷಣೆ ಕೂಗುತ್ತಿದ್ದಾರೆ..
ಹೌದು.. ಯುವ ರಾಜ್‌ಕುಮಾರ್ (Yuva rajkumar ) ನಟನೆಯ ಯುವ ಸಿನಿಮಾ ತೆರೆಗೆ ಅಪ್ಪಳಿಸಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಯುವ ನಟನೆಯನ್ನು ಕೊಂಡಾಡುತ್ತಿದ್ದಾರೆ. ಅಲ್ಲದೆ, ಸಿನಿಮಾದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ.
ಇಂದು (ಮಾರ್ಚ್ 29) ಬೆಳ್ಳಂಬೆಳಗ್ಗೆ ʼಯುವʼ ರಿಲೀಸ್ ಆಗಿದ್ದು, ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ಮೊದಲ ಸಿನಿಮಾದಲ್ಲಿಯೇ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಥಿಯೇಟರ್‌ನಲ್ಲಿ ಅಪ್ಪು ಘೋಷಣೆ ಮೊಗಳುತ್ತಿದೆ. ಅಲ್ಲದೆ, ಸಿನಿಮಾ ನೋಡಿ ಬಂದವರು ನಿರ್ದೇಶಕ ಆನಂದ್ ರಾಮ್ ( Santhosh Ananddram )ಅವರನ್ನ ಹೊಗಳುತ್ತಿದ್ದಾರೆ. ಇನ್ನೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವನಲ್ಲಿ ಅಡಗಿದ್ದ ಟ್ಯಾಲೆಂಟ್‌ನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಯುವ ಸಿನಿಮಾ ನಿಮ್ಮನ್ನ ಕೊನೆವರೆಗೂ ಎಂಗೇಜ್ ಮಾಡಿ ಕೂರಿಸುತ್ತೆ.
ಸಿನಿಮಾ ನೋಡಿದವರು ಏನಂದ್ರು..? (Yuva Movie Review) : ʼಯುವʼ ಕೌಟುಂಬಿಕ ಸಂದೇಶ ಸಾರುವ ಸಿನಿಮಾ. ಫಸ್ಟ್ ಟೈಮ್ ನಟನೆ ಮಾಡ್ತೀದಾರೆ ಅಂತ ಅನಿಸಲ್ಲ, ಅಷ್ಟು ಅದ್ಭುತವಾಗಿ ಯುವ ಅಭಿನಯಿಸಿದ್ದಾರೆ. ತೆರೆ ಮೇಲೆ ಪುನೀತ್ ರಾಜ್‌ಕುಮಾರ್ ಅವರನ್ನೇ ನೋಡಿದ ಹಾಗೆ ಆಗುತ್ತೆ. ಆಂಗ್ರಿ ಯಂಗ್ ಮ್ಯಾನ್ ಲುಕ್‌ನಲ್ಲಿ ಯುವ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಸಖತ್ತಾಗಿದೆ. ಫೈಟ್, ನಟನೆ, ಡ್ಯಾನ್ಸ್ ಎಲ್ಲವೂ ಸೂಪರ್, ಸಂತೋಷ್ ಆನಂದ್‌ರಾಮ್ ಕನ್ನಡಕ್ಕೆ ಒಂದು ಒಳ್ಳೆಯ ಸಿನಿಮಾ ನೀಡಿದ್ದಾರೆ. ಇತರೆ ಪಾತ್ರವರ್ಗ ಅದ್ಭುತವಾಗಿ ನಟಿಸಿದೆ ಎಂದು ಪ್ರೇಕ್ಷಕರು ಹೊಗಳುತ್ತಿದ್ದಾರೆ.
Share this content:
Post Comment