ಪ್ರಶಾಂತ್ ಸಂಬರ್ಗಿಗೆ ಕೊಲೆ ಬೆದರಿಕೆ..! ರಾಮೇಶ್ವರಂ ಕಫೆ ಉಲ್ಲೇಖ, ಎಫ್ಐಆರ್ ದಾಖಲು
Prashanth Sambargi threat message : ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿಗೆ ಬೆದರಿಕೆ ಸಂದೇಶ ಬಂದಿದೆ. ವಾಟ್ಸಪ್ ನಂಬರ್ ಮತ್ತು ಇಮೇಲ್ ಮೂಲಕ ಪ್ರಶಾಂತ್ ಹಾಗೂ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಅಲ್ಲದೆ ಅವರ ಮೇಲೆ ಆ್ಯಸಿಡ್ ಹಾಕುವುದಾಗಿ ಅಪರಿಚಿತರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಶಾಂತ್ ಸಂಬರ್ಗಿ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದೇಶಿ ಮೊಬೈಲ್ ಸಂಖ್ಯೆಗಳಿಂದ ಬಂದ ಸಂದೇಶದಲ್ಲಿ ಸಂಬರ್ಗಿ ಕುಟುಂಬವನ್ನು ಬಲಿ ಪಡೆಯುವುದಾಗಿ (Prashanth Sambargi gets threat message) ಕಿಡಿಗೇಡಿಗಳು ಎಚ್ಚರಿಕೆ ನೀಡಿದ್ದಾರೆ.
ಮಾರ್ಚ್ 10ರ ಮಧ್ಯರಾತ್ರಿಯಿಂದ ಈ ಸಂದೇಶಗಳು ಬಂದಿವೆ. ನನ್ನ ಮೊಬೈಲ್ ಹ್ಯಾಕ್ ಮಾಡಲಾಗಿದ್ದು, ಖಾಸಗಿ ಮಾಹಿತಿ, ಕಾಲ್ ರೆಕಾರ್ಡ್ ಹಾಗೂ ಇಮೇಲ್ಗಳನ್ನು ಟ್ರಾನ್ಸ್ಫರ್ ಮಾಡಲಾಗಿದೆ ಎಂದು ಪ್ರಶಾಂತ್ ಸಂಬರ್ಗಿಯವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಪ್ರಶಾಂತ್ ಅವರಿಗೆ ಬಂದ ಸಂದೇಶಗಳಲ್ಲಿ ರಾಮೇಶ್ವರಂ ಕೆಫೆ ಉಲ್ಲೇಖಿಸಲಾಗಿದ್ದು, ಬಾಂಬ್ ಸ್ಪೋಟದ ನಂಟು ಇರುವುದು ಕಂಡುಬಂದಿದೆ. ಅಂದಹಾಗೆ ಬಾಂಬ್ ಸ್ಪೋಟದ ಬಳಿಕ ರಾಮೇಶ್ವರಂ ಕೆಫೆ ಉದ್ಘಾಟನೆಗೆ ಪ್ರಶಾಂತ್ ಸಂಬರ್ಗಿ ಹೋಗಿದ್ದರು.
Share this content:
Post Comment