Loading Now

ಅಲ್ಲು ಅರ್ಜುನ್‌ ಮೇಣದ ಪ್ರತಿಮೆ ರೆಡಿ..! ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಬನ್ನಿ

ಅಲ್ಲು ಅರ್ಜುನ್‌ ಮೇಣದ ಪ್ರತಿಮೆ ರೆಡಿ..! ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಬನ್ನಿ

Allu Arjun Wax Statue: ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಅಲ್ಲು ಅರ್ಜುನ್ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಅಲ್ಲು ಅರ್ಜುನ್ (Allu Arjun) ದುಬೈಗೆ ತೆರಳಿ ಸ್ವತಃ ತಮ್ಮ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಬನ್ನಿ ತಮ್ಮ ಮೊದಲ ಸಿನಿಮಾ ಗಂಗೋತ್ರಿ ಬಿಡುಗಡೆಯಾಗಿ ಇಂದಿಗೆ 21 ವರ್ಷಗಳಾದ ಹಿನ್ನೆಲೆ, ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ವಿಶೇಷ.

ʼಅಲ ವೈಕುಂಠಪುರಮುಲೋʼ ರೆಡ್ ಬ್ಲೇಜರ್ ‘ಪುಷ್ಪ’ ಸಿನಿಮಾದ ಲುಕ್‌ನಲ್ಲಿರುವ ಮೇಣದ ಪ್ರತಿಮೆಯ (allu arjun wax statue) ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೇಡಮ್ ಟುಸ್ಸಾಡ್ಸ್ ಈ ಹಿಂದೆ ಅಲ್ಲು ಅರ್ಜುನ್ ಅವರ ಪ್ರತಿಮೆ ನಿರ್ಮಿಸಲು ಅಳತೆಗಳನ್ನು ತೆಗೆದುಕೊಂಡಿತ್ತು. ಇದೀಗ ಪ್ರತಿಮೆಯನ್ನು ಅನಾವರಣಗೊಳಿಸಿದೆ.

ಅಲ್ಲು ಅರ್ಜುನ್ ಅವರ ಕೊನೆಯ ಚಿತ್ರ ಪುಷ್ಪ ಪಾನ್ ಇಂಡಿಯಾ ಲೆವೆಲ್‌ನಲ್ಲಿ ಹೆಸರು ಮಾಡಿತು. ಈ ಬ್ಲಾಕ್ಬಸ್ಟರ್‌ ಸಿನಿಮಾ ರೂ. 365 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ. ಸದ್ಯ ಅಲ್ಲು ಅರ್ಜುನ್ ಸುಕುಮಾರ್ ನಿರ್ದೇಶನದ ‘ಪುಷ್ಪ 2’ (Pushpa 2: The Rule) ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

ಪುಷ್ಪಾ 2 ಸ್ವಾತಂತ್ರ್ಯೋತ್ಸವದ ಉಡುಗೊರೆಯಾಗಿ ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದ್ದಾರೆ. ಪುಷ್ಪ 2 ಸಿನಿಮಾದ ನಂತರ ಅಲ್ಲು ಅರ್ಜುನ್ ಹಲವು ಕ್ರೇಜಿ ಪ್ರಾಜೆಕ್ಟ್ ಗಳನ್ನು ಮಾಡಲಿದ್ದಾರೆ. ತ್ರಿವಿಕ್ರಮ್, ಸಂದೀಪ್ ರೆಡ್ಡಿ ವಂಗ, ಬೋಯಪತಿ ಶ್ರೀನು, ಅಟ್ಲಿ ಮತ್ತು ಸುರೇಂದ್ರ ರೆಡ್ಡಿ ಅವರಂತಹ ಸ್ಟಾರ್‌ ನಿರ್ದೇಶಕರೊಂದಿಗೆ ಚಿತ್ರಗಳನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.

Share this content:

Post Comment

You May Have Missed