Loading Now

ಬೈಕ್‌ ಅಪಘಾತದಲ್ಲಿ ಖ್ಯಾತ ನಟ ನವೀನ್ ಪೋಲಿಶೆಟ್ಟಿಗೆ ಗಂಭೀರ ಗಾಯ..! ಕೈ ಮುರಿತ

ಬೈಕ್‌ ಅಪಘಾತದಲ್ಲಿ ಖ್ಯಾತ ನಟ ನವೀನ್ ಪೋಲಿಶೆಟ್ಟಿಗೆ ಗಂಭೀರ ಗಾಯ..! ಕೈ ಮುರಿತ

Naveen Polishetty : ಟಾಲಿವುಡ್‌ ನಟ ನವೀನ್ ಪೋಲಿಶೆಟ್ಟಿ ಅಪಘಾತಕ್ಕೀಡಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಬೈಕ್ ರೈಡ್‌ ಮಾಡುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆ ಅಮೆರಿಕದಲ್ಲಿ ನಡೆದಿದೆ.

ಹೌದು.. ಸದ್ಯ ನಟ ನವೀನ್‌ ಅಮೆರಿಕದಲ್ಲಿದ್ದಾರೆ. ಎರಡು ದಿನಗಳ ಹಿಂದೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ನಟನ ಕೈಗೆ ತೀವ್ರ ಪೆಟ್ಟಾಗಿದ್ದು, ಕೈ ಮುರಿತವಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ನವೀನ್ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟಾಲಿವುಡ್‌ ಮಾತನಾಡಿಕೊಳ್ಳುತ್ತಿದೆ. ಮತ್ತೊಂದೆಡೆ, ಗಂಭೀರವಾಗಿ ಗಾಯಗೊಂಡಿರುವ ನವೀನ್‌ ಸುಮಾರು ಎರಡು ತಿಂಗಳು ವಿಶ್ರಾಂತಿ ಬೇಕು ಎಂದು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Share this content:

Post Comment

You May Have Missed