ನಟ ಸಿದ್ದಾರ್ಥ್ ಮತ್ತು ಅದಿತಿ ಮದುವೆ ಸುಳ್ಳು…! ಹಾಗಿದ್ರೆ ದೇವಸ್ಥಾನಲ್ಲಿ ನಡೆದದ್ದು ಏನು..?
Aditi Rao Hydari and Siddharth are engaged : ತಮಿಳು ನಟ ಸಿದ್ಧಾರ್ಥ್ ಮತ್ತು ತೆಲುಗು ನಟಿ ಅದಿತಿ ರಾವ್ ಹೈದರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇಬ್ಬರೂ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ಕುರಿತು ಜೋಡಿ ಸ್ಪಷ್ಟನೆ ನೀಡಿದೆ.
ಹೌದು.. ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ತೆಲಂಗಾಣದ ದೇವಸ್ಥಾನವೊಂದರಲ್ಲಿ ಗುಟ್ಟಾಗಿ ಮದುವೆಯಾದರು ಅಂತ ಹೇಳಲಾಗುತ್ತಿತ್ತು. ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಈ ಅದಿತಿ ಮತ್ತು ಸಿದ್ದು ಕ್ಲಾರೀಟಿ ನೀಡಿದ್ದು, ಇಬ್ಬರ ಫ್ಯಾನ್ಸ್ಗಳ ಖುಷಿಗೆ ಕಾರಣವಾಗಿದೆ.
ಸಿದ್ದು ಮತ್ತು ಅದಿತಿ ಮದುವೆಯಾಗಿಲ್ಲ ಬದಲಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಜೋಡಿ ಬಹಿರಂಗಪಡಿಸಿದೆ. ಉಂಗುರ ಬದಲಿಸಿಕೊಂಡಿರುವ ಫೋಟೋವನ್ನು (Aditi Rao Hydari and Siddharth confirm engagement) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
‘ಮಹಾ ಸಮುದ್ರಂ’ ಎಂಬ ತೆಲುಗು ಸಿನಿಮಾದ ಮೂಲಕ ನಟ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಪರಿಚಯವಾಗಿತ್ತು. ನಂತರ ಇಬ್ಬರ ನಡುವಿನ ಸ್ನೇಹ ಪ್ರಿತಿಗೆ ತಿರುಗಿತ್ತು. ಅಂದಿನಿಂದ ಈ ಜೋಡಿ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ತಮ್ಮ ಡೇಟಿಂಗ್ ಸಿಕ್ರೇಟ್ ರಿವೀಲ್ ಮಾಡಿದ್ದರು. ಇದೀಗ ಅಧಿಕೃತವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
Share this content:
Post Comment