ಕಾಚಾಪುರದಲ್ಲಿ ಸೋನುಗೌಡ : ದತ್ತು ವಿಚಾರ ತಿಳಿದು ಅಟ್ಟಾಡಿಸಿದ ಗ್ರಾಮಸ್ಥರು
Sonu Srinivas Gowda : ಬಾಲಕಿ ದತ್ತು ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಅವರನ್ನು ಸ್ಥಳ ಮಹಜರ ಮಾಡಲು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮದಕ್ಕೆ ಕರೆತರಲಾಗಿದೆ. ತಮ್ಮ ಗ್ರಾಮದ ಮಗುವನ್ನು ದತ್ತು ಪಡೆದ ವಿಚಾರ ತಿಳಿದು ಗ್ರಾಮಸ್ಥರು ಕೆಂಡಾಮಂಡಲವಾದರು.
ರೀಲ್ಸ್ ಸ್ಟಾರ್ ಸೋನು ಗೌಡ ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಧಿಸಿ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರು ಮಾಡಲು, ರಾಯಚೂರಿನ ಕಾಚಾಪುರಕ್ಕೆ ಕರೆತಂದಿದ್ದಾರೆ.
ಸೋನು ಬಾಲಕಿ ಚಿಕ್ಕಪ್ಪ ಅಮರೇಗೌಡ ಎಂಬುವವರ ಮನೆಯಿಂದ ಮಗು ಕರೆದೊಯ್ದಿದ್ದರು. ಈ ಹಿನ್ನೆಲೆ ಆ ಮನೆಯಲ್ಲಿ ಸ್ಥಳ ಮಹಜರು ಮಾಡಲಾಗುತ್ತಿದೆ. ದತ್ತು ಪ್ರಕರಣ ವಿಚಾರ ತಿಳಿಯುತ್ತಲೇ ಕೊಪಗೊಂಡ ಗ್ರಾಮಸ್ಥರು ಸೋನುಗೌಡಳನ್ನ ಹಿಡಿದು ಕಟ್ಟಿ ಹಾಕಲು ಮುಂದಾದರು. ಆಗ ಬ್ಯಾಡರಹಳ್ಳಿ ಪೊಲೀಸರು ಅಲ್ಲಿಂದ ಸೋನು ಗೌಡ ಅವರನ್ನು ಕರೆದೊಯ್ಯದರು.
Share this content:
Post Comment