ಫೇಮಸ್ ಆಗಲು ಮಕ್ಕಳನ್ನು ದತ್ತು ಪಡೆದ ರೀಲ್ ಸ್ಟಾರ್..! ಸೋನು ಗೌಡ ಬಂಧನ
Sonu gowda arrest: ಬಿಗ್ಬಾಸ್ ಓಟಿಟಿ ಖ್ಯಾತಿಯ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಬಂಧನವಾಗಿದೆ. ರೀಲ್ಸ್ ಮಾಡುತ್ತಾ ಸಖತ್ ಫೇಮಸ್ ಆದ ಸೋನು ಗೌಡ ಇದೀಗ ಪೊಲೀಸರ ವಶದಲ್ಲಿದ್ದಾರೆ.
ಕಳೆದ ಎರಡು ಮೂರು ತಿಂಗಳ ಹಿಂದೆ ಸೋನು ಒಂದು ಹೆಣ್ಣು ಮಗುವನ್ನ ದತ್ತು ಪಡೆದಿದ್ದರು. ಈ ಕುರಿತ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡಿತ್ತು. ಇನ್ನು ಇದೇ ವಿಚಾರವಾಗಿ ಸೋನು ಗೌಡ ಬಂಧನವಾಗಿದೆ ಎನ್ನಲಾಗಿದೆ.
ಸೋನು ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆದಿಲ್ಲ ಮತ್ತು ಆ ಮಗುವನ್ನು ರೀಲ್ಸ್ ಮಾಡಿಕೊಳ್ಳಲು ಬಳಸಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾಗಿ ತಿಳಿದು ಬಂದಿದೆ.
ಮಗುವನ್ನು ದತ್ತು ತೆಗೆದುಕೊಳ್ಳುವ ಹಿಂದೆ ಸೋನು ಒಳ್ಳೆಯ ಉದ್ದೇಶ ಹೊಂದಿರಲಿಲ್ಲ ಎನ್ನಲಾಗಿದೆ. ಕಾರಣ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮತ್ತು ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಳು ಎನ್ನಲಾಗಿದೆ.
Share this content:
Post Comment