Puneeth Rajkumar: ʼನನಗೆ ನೀನು ಎಂದೆಂದಿಗೂ ಪುಟ್ಟ ತಮ್ಮʼ : ತಮ್ಮನಿಗೆ ಶಿವಣ್ಣನ ಭಾವುಕ ಸಂದೇಶ
Puneeth Rajkumar birthday : ಇಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹಬ್ಬ. ಅಪ್ಪು ಅಭಿಮಾನಿಗಳಿಗೆ ಸಂತಸದ ದಿನ. ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪು ಅಜರಾಮರ. ಇದೀಗ ಶಿವರಾಜ್ಕುಮಾರ್ ಅವರು ಕೂಡ ಸಹೋದರನಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ಶಿವಣ್ಣ ತಮ್ಮ ಎಕ್ಸ್ ಖಾತೆಯ ಪೋಸ್ಟ್ನಲ್ಲಿ, ಅಪ್ಪು ಆಗಿ ಬಂದ ನೀನು ಪುನೀತನಾಗಿ ಎಲ್ಲರ ಮನಸ್ಸಲ್ಲೂ ಭದ್ರವಾಗಿ ಇದ್ದುಬಿಟ್ಟೆ. ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ, ಎಷ್ಟೋ ಜನಕ್ಕೆ ನೀನು ಮಾರ್ಗದರ್ಶಿ, ಅವರ ಆರಾಧ್ಯ ದೈವ, ಕೋಟಿ ಕೋಟಿ ಅಭಿಮಾನಿಗಳಿಗೆ ಪ್ರೀತಿಯ ಪವರ್ ಸ್ಟಾರ್.
ಆದರೆ ನನಗೆ ಎಂದೆಂದಿಗೂ ನನ್ನ ಪುಟ್ಟ ತಮ್ಮ. ನನ್ನ ಕೈ ಹಿಡಿದು ನಡೆದ ತಮ್ಮ, ನಿನ್ನ ನಗುವಲ್ಲಿ ನನ್ನ ಸಂತೋಷ ಹುಡುಕಿ ಕೊಟ್ಟ ತಮ್ಮ, ನನ್ನ ಎದೆಯ ಮೇಲೆ ಮಲಗಿದ ತಮ್ಮ. ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದು ಶಿವಣ್ಣ ಬರೆದುಕೊಂಡಿದ್ದಾರೆ.
Share this content:
Post Comment