ಟೈಮ್ ಸ್ಕ್ವೇರ್ನಲ್ಲಿ ರಾರಾಜಿಸಿದ ರಾಜರತ್ನ ಪುನೀತ್ ರಾಜಕುಮಾರ್..!
Happy Birthday Puneeth Rajkumar : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ದೇಶ ವಿದೇಶದಲ್ಲಿಯೂ ಅಭಿಮಾನಗಳು ಇದ್ದಾರೆ. ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಸಾಕಷ್ಟು ಜನ ಪ್ಯಾನ್ಸ್ ಭೇಟಿ ಕೊಟ್ಟು ದರ್ಶನ ಪಡೆಯುತ್ತಿದ್ದಾರೆ. ಇದೆ ವೇಳೆ ನ್ಯೂಯಾರ್ಕ್ನಲ್ಲೂ ಪುನೀತ್ ಅವರ ಬರ್ತ್ ಡೇ ಆಚರಿಸಲಾಗಿದ್ದು, ಈ ಕುರಿತು ಫೋಟೋಸ್ ವೈರಲ್ ಆಗಿವೆ..
ನ್ಯೂಯಾರ್ಕ್ನಲ್ಲಿರುವ ಅಪ್ಪು ಅಭಿಮಾನಿಗಳು, ಅವರ ಬರ್ತ್ ಡೇ ಅನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಟೈಮ್ ಸ್ಕ್ವೇರ್ ಮೇಲೆ ಪುನೀತ್ ರಾಜ್ಕುಮಾರ್ ಮತ್ತು ಅವರ ಪತ್ನಿ ಅಶ್ವೀನಿ ಪುನೀತ್ ರಾಜ್ಕುಮಾರ್ ಫೋಟೋ ಹಾಕಿ ಸಂಭ್ರಮಿಸಲಾಗಿದೆ.
ಮಾರ್ಚ್ 17 ಅಂದ್ರೆ ಇಂದು ಪುನೀತ್ ರಾಜಕುಮಾರ್ ಅವರ 49 ನೇ ಜನ್ಮ ದಿನವನ್ನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನ ಟೈಮ್ ಸ್ಕ್ವರ್ನಲ್ಲಿ ಅಪ್ಪು ಚಿತ್ರ ಪ್ರದರ್ಶಿಸಲಾಗಿದೆ. ಈ ಮೂಲಕ ಅಲ್ಲಿರುವ ಅಪ್ಪು ಫ್ಯಾನ್ಸ್ ತಮ್ಮ ನೆಚ್ಚಿನ ನಾಯಕ ಹುಟ್ಟು ಹಬ್ಬವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.
ಇನ್ನು ರಾಜ್ಯದಲ್ಲಿಯೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಸಂಭ್ರಮ ಜೋರಾಗಿಯೇ ಇದೆ. ಅವರ ಅಭಿಮಾನಿಗಳು ರಕ್ತದಾನ, ಅನ್ನದಾನ ಹೀಗೆ ಹಲವಾರು ಸಮಾಜ ಮುಖಿ ಕೆಲಸಗಳನ್ನ ಮಾಡುತ್ತಿದ್ದಾರೆ. ಸಧ್ಯ ನ್ಯೂಯಾರ್ಕ್ ಟೈಮ್ ಸ್ಕ್ವೇರ್ನಲ್ಲಿ ಪ್ರದರ್ಶನವಾದ ಅಪ್ಪು ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Share this content:
Post Comment