Loading Now

ವಿಶ್ವ ಮಟ್ಟದಲ್ಲಿ ಅಪರೂಪ ಗೌರವಕ್ಕೆ ಪಾತ್ರರಾದ ನಟಿ ರಶ್ಮಿಕಾ..! ಕನ್ನಡಿಗರಿಗೆ ಇದು ಹೆಮ್ಮೆ

ವಿಶ್ವ ಮಟ್ಟದಲ್ಲಿ ಅಪರೂಪ ಗೌರವಕ್ಕೆ ಪಾತ್ರರಾದ ನಟಿ ರಶ್ಮಿಕಾ..! ಕನ್ನಡಿಗರಿಗೆ ಇದು ಹೆಮ್ಮೆ

Rashmika Mandanna : ಸ್ಯಾಂಡಲ್‌ವುಡ್‌ ನಟಿ ರಶ್ಮಿಕಾ ಮಂದಣ್ಣ ಸಧ್ಯ ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್‌ ನಟನೆಯ ʼಪುಷ್ಪಾʼ ಸಿನಿಮಾದಿಂದ ಕ್ರೇಜ್‌ ಗಿಟ್ಟಿಸಿಕೊಂಡ ಸುಂದರಿ ನಟಿಸಿರುವ ಎಲ್ಲಾ ಚಿತ್ರಗಳು ಸೂಪರ್‌ ಹಿಟ್‌ ಆಗುತ್ತಿವೆ. ಸಧ್ಯ ನಟಿ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದು, ಅವರ ಆಭಿಮಾನಿಗಳಿಗೆ ಖುಷಿ ತಂದಿದೆ.

ಇತ್ತೀಚಿಗೆ ಜಪಾನ್‌ನಲ್ಲಿ ನಡೆದ ʼಕ್ರಾಂಚಿರಾ ರೋಲ್ ಅನಿಮೆ ಅವಾರ್ಡ್ಸ್ʼ (Crunchy Roll Anime Awards)ನಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು. ಈ ಪ್ರಶಸ್ತಿ ಸಮಾರಂಭದಲ್ಲಿ ರಶ್ಮಿಕಾ ಭಾರತವನ್ನು ಪ್ರತಿನಿಧಿಸಿದ್ದರು. ಈ ಗೌರವಕ್ಕೆ ಪಾತ್ರರಾದ ಏಕೈಕ ನಟಿಯಾಗಿದ್ದಾರೆ ರಶ್ಮಿಕಾ.

20ರಿಂದ 26ರವರೆಗೆ ಇಟಲಿಯ ಮಿಲಾನ್ ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ರಶ್ಮಿಕಾ ಮಂದಣ್ಣ ರ್ಯಾಂಪ್ ವಾಕ್ ಮಾಡಿದ್ದರು. ರಶ್ಮಿಕಾ ಈ ಫ್ಯಾಷನ್ ಶೋನಲ್ಲಿ ಭಾಗವಹಿಸುವ ಮೂಲಕ ಒನಿಟ್ಸುಕಾ ಟೈಗರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿದರು. ಇದು ಮಿಲನ್ ಫ್ಯಾಶನ್ ವೀಕ್‌ನಲ್ಲಿ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ. ರಶ್ಮಿಕಾ ಮಂದಣ್ಣ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‌ನ ಅಂಬಾಸಿಡರ್ ಆಗಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಮುಂಬರುವ ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2 ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ದಿ ಗರ್ಲ್ ಫ್ರೆಂಡ್ ಸಿನಿಮಾ ಜೊತೆಗೆ ಬಾಲಿವುಡ್‌ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಇತ್ತೀಚಿಗೆ ನಟ ವಿಜಯ್‌ ದೇವರಕೊಂಡ ಅವರ ಜೊತೆ ರಶ್ಮಿಕಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಕುರಿತು ನಟಿ ಪ್ರತಿಕ್ರಿಯೆ ನೀಡಿಲ್ಲ.

Share this content:

Post Comment

You May Have Missed