Loading Now

ಅವನನ್ನು ಲವ್‌ ಮಾಡೋಕು ಮೊದಲು ʼಕಪ್ಪೆಗಳಿಗೆ ಕಿಸ್ʼ ಮಾಡಿದ್ದೆ : ತಾಪ್ಸಿ ಹೇಳಿಕೆ ವೈರಲ್‌

ಅವನನ್ನು ಲವ್‌ ಮಾಡೋಕು ಮೊದಲು ʼಕಪ್ಪೆಗಳಿಗೆ ಕಿಸ್ʼ ಮಾಡಿದ್ದೆ : ತಾಪ್ಸಿ ಹೇಳಿಕೆ ವೈರಲ್‌

Taapsee Pannu : ನಟಿ ತಾಪ್ಸಿ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ತೆರೆ ಕಂಡ ಶಾರುಖ್‌ ಖಾನ್‌ ನಟನೆಯ ಡಂಕಿ ಚಿತ್ರದಲ್ಲಿ ತಾಪ್ಸಿ ನಟಿಸಿದ್ದರು. ಇನ್ನು ಕಳೆದ ಹತ್ತು ವರ್ಷಗಳಿಂದ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜೊತೆ ಡೇಟಿಂಗ್ ನಡೆಸುತ್ತಿರುವ ಸುಂದರಿ ಕಿಸ್‌ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಮೂಡಿಸುತ್ತಿದೆ.

ಹೌದು.. ಮಥಿಯಾಸ್‌ನನ್ನು ಲವ್‌ ಮಾಡುವ ಮೊದಲು, ತಾಪ್ಸಿ ಕೆಲವು ಜನರೊಂದಿಗೆ ಡೇಟಿಂಗ್‌ ಮಾಡುತ್ತಿದ್ದರು. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡುವಾಗ ಕಿಸ್‌ ವಿಚಾರವಾಗಿ ನೀಡಿದ ನಟಿಯ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ತಾಪ್ಸಿ ತಮ್ಮ ಹಿಂದಿನ ಡೇಟಿಂಗ್ ಅನುಭವಗಳ ಬಗ್ಗೆ ಮಾತನಾಡುತ್ತ, ರಾಜಕುಮಾರನನ್ನು ಪಡೆಯುವ ಮೊದಲು ಅನೇಕ ಕಪ್ಪೆಗಳಿಗೆ ಚುಂಬಿಸಬೇಕು ಅಂತ ತಮ್ಮ ಹಳೆ ಪ್ರೇಮ ಕಥೆಗಳ ಕುರಿತು ಪರೋಕ್ಷವಾಗಿ ಬಹಿರಂಗ ಪಡಿಸಿದರು. ಈ ಹೇಳಿಕೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ಅಲ್ಲದೆ, ಕಳೆದ ಹತ್ತು ವರ್ಷಗಳಿಂದ ಮಥಿಯಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ, ಅವರ ಜೊತೆ ತುಂಬಾ ಪ್ರಾಮಾಣಿಕಳಾಗಿದ್ದೇನೆ, ನನ್ನ ಹಿಂದಿನ ಸಂಬಂಧಗಳ ಬಗ್ಗೆ ಮುಚ್ಚಿಟ್ಟಿಲ್ಲ ಅಂತ ಹೇಳಿಕೊಂಡಿದ್ದಾರೆ. ಮಥಿಯಾಸ್‌ನನ್ನು ಭೇಟಿಯಾಗುವ ಮೊದಲು ಕೆಲವು ಜನರೊಂದಿಗೆ ಡೇಟಿಂಗ್ ಮಾಡಿದ್ದಾಗಿ ನಟಿ ತಾಪ್ಸಿ ಬಹಿರಂಗ ಪಡಿಸಿದ್ದಾರೆ.

Share this content:

Post Comment

You May Have Missed